ಐವರು ಶ್ರೀಗಂಧ ಸ್ಮಗ್ಲರ್ ಗಳ ಬಂಧನ

Forest police officers arrested 5 sandalwood smugllers

11-07-2018

ವಿಜಯಪುರ: ಅರಣ್ಯ ಇಲಾಖೆ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಶ್ರೀಗಂಧದ ಕಟ್ಟಿಗೆ ಕದ್ದು ಸಾಗಿಸುತ್ತಿದ್ದ ಸ್ಮಗ್ಲರ್ ಗಳನ್ನು ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯ ಇಂಡಿ ತಾಲ್ಲೂಕಿನ, ಸಿಂದಗಿ ಭಾಗದ ಭೀಮಾತೀರದಲ್ಲಿ ನೈಸರ್ಗಿಕವಾಗಿ ಬೆಳೆಯುವ ಶ್ರೀಗಂಧ ಮರಗಳನ್ನ ಕಡಿದು ಸಾಗಾಟ ಮಾಡಲಾಗುತ್ತಿದ್ದು, ಖಚಿತಿ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, 65 ಕೆಜಿಗೂ ಅಧಿಕ ಹಸಿ ಶ್ರೀಗಂಧ ಕಟ್ಟಿಗೆಗಳನ್ನು ವಶಕ್ಕೆ ಪಡೆದಿದ್ದಾರೆ. ಎಲ್ಲಪ್ಪ ಮೋರೆ, ಗೋವಿಂದ, ಕುಮಾರ್ ಗಾಯಕವಾಡ್, ಲಕ್ಷ್ಮಣ, ರಮೇಶ್ ಸೋಲಾಪೂರ್ ಬಂಧಿತ ಆರೋಪಿಗಳು.

ಇಂಡಿ ತಾಲ್ಲೂಕಿನ ಸಿಂದಗಿ ಭಾಗದ ಭೀಮಾತೀರದ ಬಳಿ ಅಕ್ರಮವಾಗಿ ಶ್ರೀಗಂಧ ಮರದ ಕಟ್ಟಿಗೆಗಳನ್ನು ಆಳೂರು ತಾಂಡಾ-2 ಬಳಿ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಆರ್.ಎಫ್.ಒ. ಬಸನಗೌಡ ಬಿರಾದಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಶ್ರೀಗಂಧ, ಆರೋಪಿಗಳು, ಸಾಗಾಟಕ್ಕೆ ಬಳಸಿದ್ದ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಮುಂಬೈ, ಮಧ್ಯಪ್ರದೇಶ ಸೇರಿದಂತೆ ಹಲವೆಡೆ ಶ್ರೀಗಂಧವನ್ನು ಅಕ್ರಮವಾಗಿ ಮಾರಾಟ ಮಾಡಿ ಲಕ್ಷಾಂತರ ರೂಪಾಯಿ ಪಡೆಯುತ್ತಿದ್ದರು ಎಂದು ತಿಳಿದು ಬಂದಿದೆ.


ಸಂಬಂಧಿತ ಟ್ಯಾಗ್ಗಳು

Sandalwood smuggler ತಾಂಡಾ ಮಧ್ಯಪ್ರದೇಶ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ