ಯಮವೇಷಧಾರಿಗಳಿಂದ ಹೆಲ್ಮೆಟ್ ಕುರಿತು ಜಾಗೃತಿ

special awareness programme by police about helmet

10-07-2018

ಬೆಂಗಳೂರು: ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನ ಚಲಾಯಿಸುವುದು ಕಡ್ಡಾಯವಾಗಿದ್ದರೂ ಅದನ್ನು ಸರಿಯಾಗಿ ಪಾಲಿಸದಿರುವುದರಿಂದ ಸಂಚಾರ ಪೊಲೀಸರು ಯಮರಾಜನನ್ನೇ ನಗರಕ್ಕೆ ಕರೆತಂದು ಹೆಲ್ಮೆಟ್ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.!

ಹಲವು ಬಾರಿ ದಂಡ ವಿಧಿಸಿ, ಪ್ರಕರಣ ದಾಖಲಿಸಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಮಾಡಿದರೂ ಹೆಲ್ಮೆಟ್ ಹಾಕದೇ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಸಂಚಾರ ಪೊಲೀಸರು ಯಮರಾಜನನ್ನೇ ಭೂಮಿಗೆ ಕರೆತಂದು ಜಾಗೃತಿ ಮೂಡಿಸಿದ್ದು ವಿಶೇಷವಾಗಿದೆ.

ಹಲಸೂರು ಗೇಟ್‍ನ ಕಾರ್ಪೋರೇಷನ್ ಸರ್ಕಲ್ ಮತ್ತು ಟೌನ್ ಹಾಲ್ ಬಳಿ ಹೆಲ್ಮೆಟ್ ಬಗ್ಗೆ ಜಾಗೃತಿ ಮೂಡಿಸಲು ಸಂಚಾರ ಪೊಲೀಸರು ಯಮ ವೇಷಧಾರಿಯನ್ನು ರಸ್ತೆಗಿಳಿಸಿ ಹೆಲ್ಮೆಟ್ ಹಾಕದಿದ್ದರೆ ಯಮರಾಜನ ಬಳಿಗೇ ಹೋಗುತ್ತೀರಾ ಎಂದು ಎಚ್ಚರಿಕೆ ನೀಡಿ ಜಾಗೃತಿ ಮೂಡಿಸಿದರು. ಹೆಲ್ಮೆಟ್ ಹಾಕದೇ ದ್ವಿಚಕ್ರ ವಾಹನಗಳ ಚಾಲನೆ ಮಾಡುತ್ತಿದ್ದವರಿಗೆ ಯಮನಿಂದಲೇ ಎಚ್ಚರಿಕೆ ಕೊಡಿಸಿ ಗುಲಾಬಿ ಹೂ ನೀಡುವ ಮೂಲಕ ಹೆಲ್ಮೆಟ್ ಹಾಕುವಂತೆ ಮನವಿಮಾಡಿದರು.

ಗಂಗಾವತಿಯ ರಂಗಭೂಮಿ ಕಲಾವಿದ ವಿರೇಶ್ ಮುದ್ದಿನ ಮಠ ಅವರಿಗೆ ಯಮಧಾರಿಯಾಗಿ ಬೈಕ್‍ ಸವಾರರಿಗೆ ಎಚ್ಚರಿಕೆ ಮತ್ತು ಮನವೊಲಿಕೆ ಪ್ರಯತ್ನ ಮಾಡಿದರು. ಈ ವೇಳೆ ಮಾಧ್ಯಮಗಳ ಜತೆ ಮಾತನಾಡಿದ ಯಮಧಾರಿ ವಿರೇಶ್, ಎಲ್ಲರೂ ಹೆಲ್ಮೆಟ್ ಧರಿಸಿ ಬೈಕ್‍ಗಳನ್ನು ಚಾಲನೆ ಮಾಡಬೇಕು. ನಿಮಗಾಗಿ ಮನೆಯಲ್ಲಿ ನಿಮ್ಮ ಕುಟುಂಬ ಕಾಯುತ್ತಿರುತ್ತದೆ. ಸಂಚಾರ ನಿಯಮಗಳನ್ನು ಪಾಲಿಸಿ ಅಪಘಾತಗಳಿಂದ ಪ್ರಾಣ ಉಳಿಸಿಕೊಳ್ಳಿ ಎಂದು ಸಂದೇಶ ಸಾರಿದರು.


ಸಂಬಂಧಿತ ಟ್ಯಾಗ್ಗಳು

Helmet Awareness ಮಾಧ್ಯಮ ಯಮಧಾರಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ