‘ಖಾಸಗಿ ಶಾಲೆಗಳಿಂದಲೇ ಸರ್ಕಾರಿ ಶಾಲೆಗಳು ಮುಚ್ಚುವ ಪರಿಸ್ಥಿತಿ ಬಂದಿದೆ'

H.Vishwanath in vidhan sabha session

10-07-2018

ಬೆಂಗಳೂರು: ‘ವಿವಿಗಳ ಕುಲಪತಿಗಳಿಗಿಂತ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರೇ ಚೆನ್ನಾಗಿ ಇಂಗ್ಲೀಷ್ ಮಾತಾಡ್ತಾರೆ’ ಹೀಗಂತ ಹೇಳಿದ್ದು ಜೆಡಿಎಸ್ ನ ಸದಸ್ಯ ಹೆಚ್.ವಿಶ್ವನಾಥ್.

ವಿಧಾನಸಭೆಯಲ್ಲಿ ಮಾತನಾಡಿದ ವಿಶ್ವನಾಥ್ ಅವರು, ‘ಮನಸ್ಸಿಗೆ ಬಂದಂತೆ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಅನುಮತಿ ಕೊಟ್ಟ ಪರಿಣಾಮ ನಮ್ಮ ಸರ್ಕಾರಿ ಶಾಲೆಗಳು ಮುಚ್ಚುವ ಸ್ಥಿತಿ ತಲುಪಿವೆ. ನಮ್ಮ ಕನ್ನಡ ಪರ ಹೋರಾಟಗಾರರು, ಸಾಹಿತಿಗಳು ತಮ್ಮ ಮಕ್ಕಳನ್ನು ಕಾನ್ವೆಂಟ್ ಗೆ ಕಳುಹಿಸಿ ನಂತರ ಸರ್ಕಾರದ ಬಳಿ ಬಂದು ಕನ್ನಡ ಉಳಿಸಿ, ಕನ್ನಡ ಶಾಲೆಗಳನ್ನು ಉಳಿಸಿ ಎಂದು ಹೇಳೋದ್ರಿಂದ ಏನು ಪ್ರಯೋಜನವಿಲ್ಲ’ ಎಂದು ಟೀಕೆ ಮಾಡಿದ್ದಾರೆ.

ನಾವೇ ಮಾಡಿಕೊಂಡ ಹಲವು ಶಾಸನಗಳು, ಸರ್ಕಾರದ ಯೋಜನೆಗಳನ್ನು ಸರಾಗವಾಗಿ ಜನರಿಗೆ ತಲುಪಿಸುವಲ್ಲಿ ಅಡ್ಡಿಯಾಗಿವೆ, ಬೇಕಾದರೆ ಹದಿನೈದು ದಿನ ವಿಶೇಷ ಅಧಿವೇಶನ ಕರೆದು ಈ ಬಗ್ಗೆ ಚರ್ಚಿಸಿ, ಜಾತಿ, ದುಡ್ಡಿನ ಆಧಾರದ ಮೇಲೆ ವಿವಿಗಳ ಉಪನ್ಯಾಸಕರು ಕುಲಪತಿಗಳು ನೇಮಕವಾಗುತ್ತಾರೆ, ಅವರಿಗಿಂತ ನಮ್ಮ ಜಿ.ಟಿ.ದೇವೇಗೌಡರೇ ಉತ್ತಮವಾಗಿ ಇಂಗ್ಲೀಷ್ ಮಾತನಾಡುತ್ತಾರೆ ಎಂದು ಹೇಳಿದರು.


ಸಂಬಂಧಿತ ಟ್ಯಾಗ್ಗಳು

H.Vishwanath G.T.Devegowda ಉಪನ್ಯಾಸಕ ನೇಮಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ