ಮಹಿಳೆಯೊಬ್ಬರ ಚಿನ್ನದ ಮಾಂಗಲ್ಯ ಸರ ಕಳ್ಳರ ಪಾಲು

one more chain snatch incident at hebbal

10-07-2018

ಬೆಂಗಳೂರು: ನಗರದಲ್ಲಿ ಸರಗಳ್ಳರ ಹಾವಳಿ ಮುಂದುವರೆದಿದ್ದು ಇಂದು ಬೆಳ್ಳಂಬೆಳ್ಳಿಗೆ ಹೆಬ್ಬಾಳದ ಕ್ಯಾಲಸನಹಳ್ಳಿಯಲ್ಲಿ ಬಳಿ ಊರಿಗೆ ನಡೆದು ಮಕ್ಕಳೊಂದಿಗೆ ನಡೆದು ಹೋಗುತ್ತಿದ್ದ ಮಹಿಳೆಯ ಮಾಂಗಲ್ಯ ಸರವನ್ನು ಬೈಕ್‍ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಕಸಿದು ಪರಾರಿಯಾಗಿದ್ದಾರೆ.

ಕ್ಯಾಲಸನಹಳ್ಳಿಯ ಮನೆಯಿಂದ ಕೆಂಚಮ್ಮ ಅವರು ಬೆಳಿಗ್ಗೆ 7.30ರ ವೇಳೆ ಊರಿಗೆ ಹೋಗಲು ಬಸ್ ನಿಲ್ದಾಣಕ್ಕೆ ನಡೆದುಕೊಂಡು ಹೋಗುತ್ತಿದ್ದರು. ಅವರ ಮಕ್ಕಳು ಮುಂದೆ ಹೋಗುತ್ತಿದ್ದರು. ಹಿಂದೆ ಕೆಂಚಮ್ಮ ಅವರು ಹೋಗುತ್ತಿದ್ದನ್ನು ಹಿಂಬಾಲಿಸಿ ಒಂದೇ ಬೈಕ್‍ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಅವರ ಕತ್ತಿನಲ್ಲಿದ್ದ 25ಗ್ರಾಂ. ತೂಕದ ಮಾಂಗಲ್ಯ ಸರವನ್ನು ಕಸಿದು ಪರಾರಿಯಾಗಿದ್ದಾರೆ.

ಸರ ಕಿತ್ತ ಶಾಕ್‍ನಿಂದ ಮಹಿಳೆಗೆ ಯಾವ ಬೈಕ್, ದುಷ್ಕರ್ಮಿಗಳ ಮಾಹಿತಿ ನೀಡಲು ಸಾಧ್ಯವಾಗಿಲ್ಲ. ಸ್ಥಳಕ್ಕೆ ಧಾವಿಸಿರುವ ಕೊತ್ತನೂರು ಪೊಲೀಸರು ಪ್ರಕರಣ ದಾಖಲಿಸಿ ದುಷ್ಕರ್ಮಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ ಎಂದು, ಡಿಸಿಪಿ ಕಲಾಕೃಷ್ಣಸ್ವಾಮಿ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

chain snatch hebbal ನಿಲ್ದಾಣ ಮಾಂಗಲ್ಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ