ಕದ್ದ ಬೈಕ್ ಗಳಲ್ಲಿ ಶೋಕಿ ಮಾಡುತ್ತಿದ್ದವನ ಬಂಧನ

Police arrested ammature boy for bike theft case

10-07-2018

ಬೆಂಗಳೂರು: ಹುಡುಗಿಯರನ್ನು ಸೆಳೆಯಲು ಕಳವು ಮಾಡಿದ ಬುಲೆಟ್ ಬೈಕುಗಳಲ್ಲಿ ಕಾಲೇಜಿನಲ್ಲಿ ಹೀರೋ ರೀತಿ ಪೋಸ್ ಕೊಟ್ಟು ಬರುತ್ತಿದ್ದ ಅಪ್ರಾಪ್ತ ಬಾಲಕನೊಬ್ಬ ಚಿಕ್ಕಬಳ್ಳಾಪುರ ಪೊಲೀಸರು ವಶಕ್ಕೆ ತೆಗೆದುಕೊಂಡು ನಾಲ್ಕು ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ಬುಲೆಟ್ ಬೈಕ್ ಕಳವು ಹುಚ್ಚು ಹಿಡಿಸಿಕೊಂಡಿದ್ದ ಚಿಕ್ಕಬಳ್ಳಾಪುರದ ಖಾಸಗಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ 17 ವರ್ಷದ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಯನ್ನು ವಶಕ್ಕೆ ಪಡೆದುಕೊಂಡು 4 ಬುಲೆಟ್ ಬೈಕ್‍ಗಳನ್ನು ಜಪ್ತಿಮಾಡಲಾಗಿದೆ.

ವಿದ್ಯಾರ್ಥಿಯು ದಿನಕ್ಕೊಂದು ಬುಲೆಟ್ ಏರಿ ಕಾಲೇಜಿಗೆ ಬರುತ್ತಿದ್ದು, ಕಾಲೇಜು ವಿದ್ಯಾರ್ಥಿನಿಯರ ಪಾಲಿನ ಹೀರೋ ಆಗಲು ಹೊರಟಿದ್ದ. ವಾಹನ ನಿಲುಗಡೆ ಪ್ರದೇಶಗಳಲ್ಲಿ ನಿಂತಿರುವ ಬುಲೆಟ್ ಕಂಡರೆ ಸಾಕು ಕ್ಷಣ ಮಾತ್ರದಲ್ಲಿ ಎಗರಿಸುತ್ತಿದ್ದನು. ಕದ್ದ ಬೈಕಿನ ಸ್ಟಿಕ್ಕರ್, ಬಣ್ಣ ಹಾಗೂ ತರಹೇವಾರಿ ಡಿಸೈನ್‍ಗಳ ಮೂಲಕ ಅಕರ್ಷಕವಾಗಿ ವಿನ್ಯಾಸ ಮಾಡಿಸುತ್ತಿದ್ದನು. ಈಗಾಗಲೇ ಬೈಕಿಗೆ ಇರುವ ಸೌಂಡ್ ಸಾಲದು ಎಂದು ಬೇರೆ ಸೈಲೆನ್ಸರ್ ಹಾಕಿಸಿ ಕಾಲೇಜಿಗೆ ಬರುತ್ತಿದ್ದನು. ಶೋಕಿಗಾಗಿ ಇಷ್ಟೆಲ್ಲಾ ಮಾಡುತ್ತಿದ್ದ ಈ ಅಪ್ರಾಪ್ತ ಇದೀಗ ಪೊಲೀಸರ ಅತಿಥಿತಿಯಾಗಿದ್ದು, ಬೈಕ್ ಕಳವು ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡಿದ್ದಾರೆ ಚಿಕ್ಕಬಳ್ಳಾಪುರ ಪೊಲೀಸರು.


ಸಂಬಂಧಿತ ಟ್ಯಾಗ್ಗಳು

Bike College ಸೈಲೆನ್ಸರ್ ಬುಲೆಟ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ