ಕಳವು ಮಾಡಿದ ದ್ವಿಚಕ್ರ ವಾಹನಗಳಲ್ಲಿ ಸರಗಳ್ಳತನ ಮಾಡುತ್ತಿದ್ದವರ ಬಂಧನ !

Kannada News

29-05-2017 214

ಬೆಂಗಳೂರು:- ಕಳವು ಮಾಡಿದ ದ್ವಿಚಕ್ರ ವಾಹನಗಳಲ್ಲಿ ನಗರದ ವಿವಿದೆಢೆ ಸಂಚರಿಸಿ ಒಂಟಿ ಮಹಿಳೆಯರ ಸರಗಳವು ಮಾಡುತ್ತಿದ್ದ ಇಬ್ಬರನ್ನು ರಾಜಗೋಪಾಲನಗರ ಪೊಲೀಸರು ಬಂಧಿಸಿದ್ದಾರೆ, 10 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಪೀಣ್ಯದ ಆಶ್ರಯನಗರದ ಪ್ರಶಾಂತ್ (22), ಪೀಣ್ಯದ ಎಸ್‍ಎಸ್‍ಎಸ್‍ನ ಮಹದೇವಸ್ವಾಮಿ (22) ಬಂಧಿತ ಆರೋಪಿಗಳು, ಬಂಧಿತರಿಂದ 10 ಲಕ್ಷ ರೂ. ಬೆಲೆಬಾಳುವ 115 ಗ್ರಾಂ ಚಿನ್ನಾಭರಣ, 9 ದ್ವಿ ಚಕ್ರವಾಹನಗಳು, 1 ಆಟೋ ರಿಕ್ಷಾ ಹಾಗೂ ವಿವಿಧ ಕಂಪನಿಯ ಬೆಲೆ ಬಾಳುವ 23 ಮೊಬೈಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಮನೆಗಳ ಬಳಿ ನಿಲ್ಲಿಸಿದ್ದ ದ್ವಿ ಚಕ್ರವಾಹನಗಳನ್ನು ಕಳವು ಮಾಡಿ, ಅವುಗಳಲ್ಲಿ ನಗರದ ವಿವಿದೆಢೆ ಸಂಚರಿಸಿ ಒಂಟಿಯಾಗಿ ಓಡಾಡುವ ಮಹಿಳೆಯರು ಹಾಗೂ ಪುರಷರಿಗೆ ಏರ್‍ಗನ್, ಚಾಕು, ಡ್ರಾಗರ್‍ನಂತಹ ಮಾರಕಾಯುಧಗಳನ್ನು ತೋರಿಸಿ ಚಿನ್ನ ಚಿನ್ನಾಭರಣ ಹಾಗೂ ಮೊಬೈಲ್ ಪೋನ್‍ಗಳನ್ನು ಸುಲಿಗೆ ಮಾಡುತ್ತಿದ್ದರು, ಎಂದು ಡಿಸಿಪಿ ಲಾಬೂರಾಮ್ ತಿಳಿಸಿದ್ದಾರೆ. ಆರೋಪಿಗಳ ದಸ್ತಗಿರಿಯಿಂದ ಸಂಜಯನಗರ-1 ನಂದಿನಿಲೇಔಟ್-1, ಮಹಾಲಕ್ಷ್ಮಿಲೇಔಟ್-1, ಸುಬ್ರಮಣ್ಯನಗರ-1 ಸರ ಅಪಹರಣ ಹಾಗೂ ರಾಜಗೋಪಾಲನಗರ-1 ಮನೆ ಕಳವು, ಮಹಾಲಕ್ಷ್ಮಿಲೇಔಟ್, ಅನ್ನಪೂರ್ಣೇಶ್ವರಿ ನಗರ, ನಂದಿನಿಲೇಔಟ್, ರಾಜಗೋಪಾಲನಗರ ಪೊಲೀಸ್ ಠಾಣೆಯ -9 ದ್ವಿ ಚಕ್ರವಾಹನ ಹಾಗೂ 1 ಆಟೋರಿಕ್ಷಾ  ಕಳವು ಪ್ರಕರಣಗಳು ಪತ್ತೆಯಾಗಿವೆ. ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಒಂದು ಏರ್‍ಗನ್, ಒಂದು ಲೈಟರ್‍ಗನ್, ಡ್ರಾಗರ್, ಮತ್ತು  ಚಾಕುಗಳು ಇಟ್ಟುಕೊಂಡು ಸುಲಿಗೆ ಮಾಡುತ್ತಿದ್ದುದನ್ನು ಒಪ್ಪಿಕೊಂಡಿದ್ದಾರೆ. ಉತ್ತರ ವಿಭಾಗದಲ್ಲಿ ವರದಿಯಾಗಿರುವ ಸರ ಅಪಹರಣ ಪ್ರಕರಣಗಳನ್ನು ತಡೆಗಟ್ಟಲು ಹಾಗೂ ವರದಿಯಾಗಿರುವ ಪ್ರಕರಣಗಳನ್ನು ಪತ್ತೆಮಾಡುವ ಸಲುವಾಗಿ  ಮಲ್ಲೇಶ್ವರಂ ಉಪ-ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಎ.ಆರ್. ಬಡಿಗೇರ್ ರವರ ನೇತೃತ್ವದಲ್ಲಿ ರಚಿಸಿದ್ದ ರಾಜಗೋಪಾಲನಗರ ಪೊಲೀಸರ ವಿಶೇಷ ತಂಡ ಆರೋಪಿಗಳನ್ನು ಬಂಧಿಸಿದೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ