ಇದು ಪೊಲೀಸರೇ ರೈಫಲ್ ಗಳನ್ನು ಬಚ್ಚಿಟ್ಟ ಕಥೆ!

police constables theft the rifles which have kept in Police station!

10-07-2018

ಬೆಂಗಳೂರು: ಠಾಣಾಧಿಕಾರಿಗೆ ಕೆಟ್ಟ ಹೆಸರು ತಂದು ಅಪವಾದ ಹೊರಿಸಲು ಸಂಚು ರೂಪಿಸಿ ಚುನಾವಣೆಯ ವೇಳೆ ಸಾರ್ವಜನಿಕರು ಠೇವಣಿ ಇಟ್ಟಿದ್ದ ರೈಫಲ್ ಕಳವು ಮಾಡಿ ಬಚ್ಚಿಟ್ಟಿದ್ದ ಕುಮಾರಸ್ವಾಮಿ ಲೇಔಟ್ ಠಾಣೆಯ ಮಹಿಳಾ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹಾಗೂ ನಾಲ್ವರು ಪೇದೆಗಳು ಸೇವೆಯಿಂದ ಅಮಾನತ್ತುಗೊಂಡಿದ್ದಾರೆ.

ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸುಮಾ ಪೇದೆಗಳಾದ ಆನಂದ್ ಕೊಳೆಕಾರ್, ಪರಮಾನಂದ ಕೋಟಿ, ಅಶೋಕ್ ಬಿರಾದರ್ ಹಾಗೂ ಬಸವರಾಜ್ ಬೆಳಗಾವಿ ಅವರನ್ನು ಹೆಚ್ಚುವರಿ ಪೊಲೀಸ್ ಆಯುಕ್ತ(ಆಡಳಿತ) ನಂಜುಂಡಸ್ವಾಮಿ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಚುನಾವಣೆ ವೇಳೆ ಸಾರ್ವಜನಿಕರು ರೈಫಲ್‍ಗಳನ್ನು ಠಾಣೆಯಲ್ಲಿ ಠೇವಣಿ ಮಾಡಿದ್ದು, ಅದರ ಉಸ್ತುವಾರಿಯನ್ನು ಠಾಣಾಧಿಕಾರಿಯವರು ವಹಿಸಿದ್ದರು. ವಯಕ್ತಿಕ ದ್ವೇಷ ಹಾಗೂ ವೃತ್ತಿ ವೈಷಮ್ಯದ ಹಿನ್ನಲೆಯಲ್ಲಿ ಠಾಣಾಧಿಕಾರಿಗೆ ಕೆಟ್ಟ ಹೆಸರು ತರಲು ಪಿಎಸ್‍ಐ ಸುಮಾ ಹಾಗೂ ನಾಲ್ವರು ಪೇದೆಗಳು ಎರಡು ಡಬಲ್ ಬ್ಯಾರಲ್ ರೈಫಲ್‍ಗಳನ್ನು ಕಳವು ಮಾಡಿದ್ದರು.

ಠಾಣೆಯಲ್ಲಿದ್ದ ರೈಫಲ್‍ಗಳು ಕಳ್ಳತನ ವಾಗಿರುವುದು ಪತ್ತೆಯಾಗಿ ಅಂತರಿಕ ವಿಚಾರಣೆ ನಡೆಸಿದಾಗ ಹೆದರಿದ ಪಿಎಸ್‍ಐ ಹಾಗೂ ಪೇದೆಗಳು ಕಳವು ಮಾಡಿದ್ದ ರೈಫಲ್‍ನ್ನು ಮರಳಿ ತಂದಿಟ್ಟಿದ್ದರು, ಈ ಸಂಬಂಧ ಕೂಲಂಕುಶ ವಿಚಾರಣೆ ನಡೆಸಿ ಕರ್ತವ್ಯ ಲೋಪದಡಿ ದಕ್ಷಿಣ ವಿಭಾಗದ ಡಿಸಿಪಿ ಶರಣಪ್ಪ ಅವರು ಕರ್ತವ್ಯ ಲೋಪದಡಿ ಐವರನ್ನು ಅಮಾನತು ಪಡಿಸುವಂತೆ ವರದಿ ಸಲ್ಲಿಸಿದ್ದರು. ಇದನ್ನು ಆಧರಿಸಿ ನಂಜುಂಡಸ್ವಾಮಿ ಅವರು ಐವರನ್ನು ಕರ್ತವ್ಯ ಲೋಪದಡಿ ಅಮಾನತುಪಡಿಸಿ ಆದೇಶ ಹೊರಡಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Rifles theft ಸಬ್ ಇನ್ಸ್ಪೆಕ್ಟರ್ ಆಯುಕ್ತ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ