ಬಿ.ಎ.ಮೊಹಿದೀನ್ ನಿಧನ: ಗದ್ಗದಿತರಾದ ರಮೇಶ್ ಕುಮಾರ್

speaker went for final funeral of b.A mohideen

10-07-2018

ಬೆಂಗಳೂರು: ಮಾಜಿ ಉನ್ನತ ಶಿಕ್ಷಣ ಸಚಿವ ಬಿ.ಎ.ಮೊಹಿದೀನ್ ನಿಧನ ಹಿನ್ನೆಲೆ, ಗೆಳೆಯ ಮೊಹಿದೀನ್ ಅವರನ್ನು ನೆನೆದು ಸ್ಪೀಕರ್ ರಮೇಶ್ ಕುಮಾರ್ ಗದ್ಗದಿತರಾದರು. ವಿಧಾನ ಸಭೆಯಲ್ಲಿ ಮೊಹಿದೀನ್ ಅವರ ನಿಧನದ ಕುರಿತು ಪ್ರಸ್ತಾಪವಾಗುತ್ತಿದ್ದಂತೆ ದುಃಖಿತರಾದ ಸ್ವೀಕರ್ ರಮೇಶ್ ಕುಮಾರ್, ಸದನದಲ್ಲಿ ಒಂದು ನಿಮಿಷ ಮೌನಾಚರಣೆ ಮೂಲಕ ಸಂತಾಪ ಸೂಚಿಸಲಾಯಿತು.

ನಂತರದಲ್ಲಿ ಮಾತನಾಡಿದ ರಮೇಶ್ ಕುಮಾರ್ ‘ ನಾನು ಯಾವುದೇ ತಪ್ಪು ಮಾಡಿದಾಗ ತಿದ್ದಿ ತೀಡುವ ಅಧಿಕಾರ ಇದ್ದದ್ದು ನನ್ನ ಸಾಕಿ ಬೆಳೆಸಿದ ದೊಡ್ಡಣ್ಣ ಹಾಗೂ ಮೊಹಿದೀನ್ ಅವರಿಗೆ ಮಾತ್ರ. ಇಂದು ಅವರನ್ನು ಕಳೆದುಕೊಂಡಿದ್ದೇನೆ. ಅವರ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಲು ಹೋಗುತ್ತಿದ್ದೇನೆ’ ಎಂದು ಹೇಳಿದರು.  ಇಂದು ಮತ್ತು ನಾಳೆ ಉಪ ಸಭಾಧ್ಯಕ್ಷರು ಸದನ ನಿರ್ವಹಣೆ ಮಾಡುತ್ತಾರೆ, ಅವರು ಹೊಸಬರು ಅವರಿಗೆ ದಯಮಾಡಿ ಸಹಕಾರ ನೀಡಿ ಎಂದು ಸದನದಲ್ಲಿ ರಮೇಶ್ ಕುಮಾರ್ ಕೇಳಿಕೊಂಡರು.


ಸಂಬಂಧಿತ ಟ್ಯಾಗ್ಗಳು

Speaker Ramesh kumar ಅಧಿಕಾರ ಗದ್ಗದಿತರಾದ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ