ಸಿಎಂ ಹೆಚ್ಡಿಕೆ ಕುರಿತು ಟ್ಟೀಟರ್ ನಲ್ಲಿ ಬಿಜೆಪಿ ವ್ಯಂಗ್ಯ!

BJP tweet about CM kumaraswamy

10-07-2018

ಬೆಂಗಳೂರು: 'ರಾಜ್ಯದಲ್ಲಿರುವ ಎಲ್ಲ ಯೂ-ಟರ್ನ್ ಫಲಕಗಳ ಜಾಗದಲ್ಲಿ ಸಿಎಂ ಕುಮಾರಸ್ವಾಮಿ ಅವರ ಫೊಟೋ ಹಾಕಬೇಕು' ಎಂದು ಟ್ಟೀಟ್ ಮಾಡಿರುವ ರಾಜ್ಯ ವಿರೋಧ ಪಕ್ಷ ಬಿಜೆಪಿ ಸಿಎಂ ಕುಮಾರಸ್ವಾಮಿಯವರ ಕಾಲೆಳೆದಿದೆ. ಬಿಜೆಪಿಯ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಸಿಎಂ ಕುರಿತು ವ್ಯಂಗ್ಯವಾಡಿದ್ದಾರೆ. ಸಚಿವ ಕೆ.ಜೆ.ಜಾರ್ಜ್ ವಿಚಾರದಲ್ಲಿ ಸಿಎಂ ಹೆಚ್ಡಿಕೆ ಯೂ-ಟರ್ನ್ ಹೊಡೆದಿದ್ದಾರೆ ಎಂದು ಟ್ಟೀಟ್ ಮಾಡಲಾಗಿದೆ. ಅಂದು ಕೆ.ಜೆ.ಜಾರ್ಜ್ ಅಂತಹವರು ಸರ್ಕಾರದಲ್ಲಿ ಇರಬಾರದೆಂದಿದ್ದರು ಕುಮಾರಸ್ವಾಮಿ. ಆದರೆ, ಇಂದು ಜಾರ್ಜ್ ಅವರನ್ನೇ ತಮ್ಮ ಸಂಪುಟದಲ್ಲಿ ಸೇರಿಸಿಕೊಂಡಿದ್ದಾರೆ ಸಿಎಂ ಎಂದು ಕಿಡಿಕಾರಿದ್ದಾರೆ.

ಡಿವೈಎಸ್ಪಿ ಗಣಪತಿ ಪ್ರಕರಣದಲ್ಲಿ ಸಚಿವ ಜಾರ್ಜ್ ಹೆಸರು ಕೇಳಿಬಂದ ಹಿನ್ನೆಲೆ, ಸಚಿವ ಜಾರ್ಜ್ ವಿರುದ್ಧ ಪ್ರತಿಭಟನೆ ನಡೆಸಿದ್ದರು ಹೆಚ್ಡಿಕೆ. ಆದರೆ, ನಿನ್ನೆ ಸದನದಲ್ಲಿ ಸಚಿವ ಜಾರ್ಜ್ ಮೇಲಿನ ಆರೋಪಗಳ ಬಗ್ಗೆ ಸ್ಪಷ್ಟನೆ ನೀಡಿದ್ದು, ಬಿಜೆಪಿ ಈ ರೀತಿಯಾಗಿ ಟ್ಟೀಟ್ ಮಾಡಿದೆ.


ಸಂಬಂಧಿತ ಟ್ಯಾಗ್ಗಳು

Twitter K.J.George ಸಂಪುಟ ಕುಮಾರಸ್ವಾಮಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ