ಕ್ರೀಡಾಂಗಣ ಬಳಿ ಸ್ಪೋಟ: ಮೂವರಿಗೆ ಶಿಕ್ಷೆ

chinnaswamy stadium bomb blast case: court announced judgement

10-07-2018

ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಿಗೆ ಕೋರ್ಟ್ ಶಿಕ್ಷೆ ಪ್ರಕಟಿಸಿದೆ. ಗೋಹಾರ್ ಅಜೀಜ್ ಗೋಮೆನಿ, ಕಮಲ್ ಹಸನ್ ಹಾಗು ಮೊಹಮದ್ ಕಪಿಲ್ ಅಕ್ತರ್ಗೆ ಶಿಕ್ಷೆ  ಪ್ರಕಟಿಸಲಾಗಿದ್ದು, ಎಲ್ಲಾ ಮೂವರು ಆರೋಪಿಗಳಿಗೆ ಒಂದು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಸೇರಿ 7ವರ್ಷ ಜೈಲು ಶಿಕ್ಷೆ ನೀಡಲಾಗಿದೆ. ನ್ಯಾಯಾಧೀಶ ಸಿದ್ದಲಿಂಗಪ್ರಭು ಈ ಆದೇಶ ನೀಡಿದ್ದಾರೆ. ಮೂವರು ಆರೋಪಿಗಳು ತಾವು ತಪ್ಪು ಮಾಡಿದ್ದಾಗಿ ಕೋರ್ಟ್ ಮುಂದೆ ಒಪ್ಪಿಕೊಂಡ ಹಿನ್ನೆಲೆ ಶಿಕ್ಷೆ ಪ್ರಕಟಿಸಿದೆ. ಇದೇ ಪ್ರಕರಣದಲ್ಲಿ ಯಾಸಿನ್ ಭಟ್ಕಳ್ ಸೇರಿ 13ಮಂದಿ ಆರೋಪಿಗಳಿದ್ದಾರೆ, ಇದರಲ್ಲಿ ಮೂವರಿಗೆ ಮಾತ್ರ ಕೋರ್ಟ್ ಶಿಕ್ಷೆ ವಿಧಿಸಿದೆ.


ಸಂಬಂಧಿತ ಟ್ಯಾಗ್ಗಳು

Bomb Blast court ನ್ಯಾಯಾಧೀಶ ಚಿನ್ನಸ್ವಾಮಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ