ನಗರದಲ್ಲಿ ಮತ್ತೆ ಸರಗಳ್ಳರ ಹಾವಳಿ

Again two chain snatch incidents was reported at Bengaluru

09-07-2018

ಬೆಂಗಳೂರು: ನಗರದಲ್ಲಿ ಮತ್ತೆ ಸರಗಳ್ಳರ ಹಾವಳಿ ಮುಂದುವರೆದಿದ್ದು ಇಂದು ಮುಂಜಾನೆ ಕೇವಲ 2 ಗಂಟೆಯ ಅವಧಿಯೊಳಗೆ ಜ್ಞಾನಭಾರತಿ, ಬಾಗಲಗುಂಟೆ, ಕೊಡಿಗೇಹಳ್ಳಿ ಸೇರಿ ಮೂರು ಕಡೆಗಳಲ್ಲಿ ಒಂಟಿ ಮಹಿಳೆಯರ ಸರಗಳವು ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ಜ್ಞಾನಭಾರತಿಯ ಜ್ಞಾನಜ್ಯೋತಿನಗರದಲ್ಲಿ ಬೆಳಿಗ್ಗೆ 5.30ರ ವೇಳೆ ವಾಯು ವಿಹಾರಕ್ಕೆ ಹೋಗುತ್ತಿದ್ದ ಭಾರತಿ ಎನ್ನುವರ ಕತ್ತಿನಲ್ಲಿದ್ದ 30ಗ್ರಾಂ ಮಾಂಗಲ್ಯಸರವನ್ನು ಬೈಕ್‍ನಲ್ಲಿ ಹಿಂದಿನಿಂದ ಬಂದ ದುಷ್ಕರ್ಮಿಗಳು ಕಸಿದು ಪರಾರಿಯಾಗಿದ್ದಾರೆ.

ಕೊಡಿಗೇಹಳ್ಳಿ: ಮಾರುತಿನಗರದ ಬಳಿ ಬೆಳಿಗ್ಗೆ 7ರ ವೇಳೆ ಸಹಕಾರನಗರದ ಪುಷ್ಪಾವತಿ ಅವರು ನಡೆದು ಹೋಗುತ್ತಿದ್ದಾಗ ಹಿಂದಿನಿಂದ ಬಂದ ದುಷ್ಕರ್ಮಿಗಳು ಅವರ ಕತ್ತಿನಲ್ಲಿದ್ದ 40ಗ್ರಾಂ. ತೂಕದ ಮಾಂಗಲ್ಯಸರನ್ನು ದೋಚಿ ಪರಾರಿಯಾಗಿದ್ದಾರೆ. ಈ ಮೂರು ಕೃತ್ಯಗಳನ್ನು ಒಂದೇ ಗ್ಯಾಂಗ್ ನಡೆಸಿದೆ ಎನ್ನುವುದನ್ನು ಪೊಲೀಸರು ತಳ್ಳಿ ಹಾಕಿದ್ದಾರೆ ಪ್ರಕರಣ ದಾಖಲಿಸಿ ದುಷ್ಕರ್ಮಿಗಳಿಗಾಗಿ ತೀವ್ರ ಶೋಧ ನಡೆಸಲಾಗಿದೆ.

ಬಾಗಲಗುಂಟೆ: ಬಾಗಲಗುಂಟೆಯ 21ನೇ ಮುಖ್ಯರಸ್ತೆಯ ಅನ್ನಪೂರ್ಣೇಶ್ವರಿ ಬೇಕರಿ ಬಳಿ ಬೆಳಿಗ್ಗೆ 5.50ರ ವೇಳೆ ನಡೆದುಕೊಂಡು ಹೋಗುತ್ತಿದ್ದ ಹೇಮಾವತಿ ಅವರ ಕತ್ತಿನಲ್ಲಿದ್ದ 35 ಗ್ರಾಂ.ತೂಕದ ಚಿನ್ನದ ಸರವನ್ನು ಬೈಕ್‍ನಲ್ಲಿ ಬಂದ ದುಷ್ಕರ್ಮಿಗಳು ದೋಚಿ ಪರಾರಿಯಾಗಿದ್ದು ಪ್ರಕರಣ ದಾಖಲಿಸಿರುವ ಬಾಗಲಗುಂಟೆ ಪೊಲೀಸರು ದುಷ್ಕರ್ಮಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Chain snatch Police ದುಷ್ಕರ್ಮಿ ಸರಗಳ್ಳ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ