ಬದಲಾಗಲಿದೆಯಂತೆ ಮಹಿಳಾ ಪೊಲೀಸ್ ಸಮವಸ್ತ್ರ!

Women

09-07-2018

ಬೆಂಗಳೂರು: ಡೊಳ್ಳು ಹೊಟ್ಟೆ ಪೊಲೀಸರ ವಿರುದ್ಧ ಕ್ರಮಕ್ಕೆ ಮುಂದಾದ ಬೆನ್ನಲ್ಲೇ, ಮಹಿಳಾ ಪೊಲೀಸರ ಸಮವಸ್ತ್ರದಲ್ಲಿ ಬದಲಾವಣೆ ತರಲು ರಾಜ್ಯ ಮೀಸಲು ಪಡೆಯ(ಕೆಎಸ್‍ಆರ್‍ಪಿ)ಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ(ಎಡಿಜಿಪಿ)ಭಾಸ್ಕರರಾವ್ ಮುಂದಾಗಿದ್ದಾರೆ.

ಕೆಎಸ್‍ಆರ್ಪಿ ಮಹಿಳಾ ಪೊಲೀಸರು ನಾಲ್ಕು ರೀತಿಯ ಯೂನಿಫಾರ್ಮ್ ಧರಿಸುತ್ತಿದ್ದಾರೆ. ಖಾಕಿ ಸೀರೆ, ಖಾಕಿ ಸಲ್ವಾರ್ ಸೇರಿ ವಿವಿಧ ಬಗೆಯ ಸಮವಸ್ತ್ರಕ್ಕೆ ಬ್ರೇಕ್ ಹಾಕಲು ನಿರ್ಧರಿಸಿರುವ ಅವರು ಪುರುಷ ಪೊಲೀಸರ ರೀತಿಯಲ್ಲೆ ಒಂದೇ ಸಮವಸ್ತ್ರದ ಧರಿಸಬೇಕೆನ್ನುವ ಸುತ್ತೋಲೆ ಹೊರಡಿಸಿದ್ದಾರೆ.

ಮಹಿಳಾ ಪೊಲೀಸ್ ಪೇದೆಗಳಿಗೂ ಫಿಟ್ನೆಸ್ ಕಾಪಾಡಿಕೊಳ್ಳುವ ದೃಷ್ಟಿಯಿಂದ ಈ ನಿರ್ಧಾರ ಎಂದು ರಾಜ್ಯ ಮೀಸಲು ಪಡೆಯ(ಕೆಎಸ್‍ಆರ್‍ಪಿ) ಎಡಿಜಿಪಿ ಭಾಸ್ಕರ್ ರಾವ್ ಹೇಳಿದ್ದಾರೆ. ಡೊಳ್ಳು ಹೊಟ್ಟೆ ಪೊಲೀಸರಿಂದ ಪೊಲೀಸ್ ಇಲಾಖೆಗೆ ಮುಜುಗರವಾಗುತ್ತಿದೆ. ಹೀಗಾಗಿ ಡೊಳ್ಳು ಹೊಟ್ಟೆ ಇರುವ ಪೊಲೀಸರ ಹೊಟ್ಟೆ ಕರಗಿಸುವ ಜವಾಬ್ದಾರಿ ಕಮಾಂಡೇಟ್ ಗಳದ್ದಾಗಿದೆ. ರಾಜ್ಯದಲ್ಲಿ ಕೆಎಸ್‍ಆರ್ ಪಿ 12 ಪಡೆಗಳಿವೆ. ಈ 12 ಪಡೆಗಳಲ್ಲಿರುವ ಡೊಳ್ಳು ಹೊಟ್ಟೆ ಪೊಲೀಸರ ಹೊಟ್ಟೆ ಕರಗಿಸುವ ಜವಾಬ್ದಾರಿ ಆಯಾ ಕಾಮಾಂಡೇಟ್‍ಗಳದ್ದು ಎಂದು  ಭಾಸ್ಕರ್ ರಾವ್ ಸುತ್ತೊಲೆ ಹೊರಡಿಸಿದ್ದಾರೆ. ಜುಲೈ 3ರಂದು ಭಾಸ್ಕರ್ ರಾವ್ ಅವರು ಈ ಸುತ್ತೋಲೆ ಹೊರಡಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

police uniform ಯೂನಿಫಾರ್ಮ್ ಫಿಟ್ನೆಸ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ