6 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ

sexula harrasement on 6 years old child

09-07-2018

ಬೆಂಗಳೂರು: ಸಂಬಂಧಿಕರ ಮದುವೆಗೆ ಪೋಷಕರ ಜೊತೆ ಬಂದಿದ್ದ 6 ವರ್ಷದ ಬಾಲಕಿಯನ್ನು ಪುಸಲಾಯಿಸಿ ಹೊರಗಡೆ ಕರೆದೊಯ್ದು ಕಾಮುಕನೊಬ್ಬ ಲೈಂಗಿಕ ದೌರ್ಜನ್ಯ ವೆಸಗಿರುವ ಹೀನಕೃತ್ಯ ಎಂ.ಎಸ್.ಪಾಳ್ಯದ ಜಾಮಿಯಾ ಮಸೀದಿ ಬಳಿ ನಡೆದಿದೆ. ಕೃತ್ಯ ಎಸಗಿದ ಎಂಎಸ್ ಪಾಳ್ಯದ ಸೊಹೇಲ್ (29)ನನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಆಟೋ ಚಾಲಕನಾಗಿದ್ದ ಆರೋಪಿಗೆ ಈಗಾಗಲೇ ಎರಡು ಮದುವೆಯಾಗಿದ್ದು ಭಾನುವಾರ ರಾತ್ರಿ ಎಂ.ಎಸ್.ಪಾಳ್ಯದ ಜಾಮಿಯಾ ಮಸೀದಿ ಬಳಿ ನಡೆಯುತ್ತಿದ್ದ ಸಂಬಂಧಿಕರ ವಿವಾಹಕ್ಕೆ ಹೋಗಿದ್ದನು.

ಅಲ್ಲಿಗೆ ಪೋಷಕರ ಜೊತೆ ಬಂದಿದ್ದ 6 ವರ್ಷದ ಬಾಲಕಿಯನ್ನು ಎತ್ತಿಕೊಂಡು ಮುದ್ದಾಡುತ್ತಾ ಮದುವೆ ಮನೆಯಿಂದ ಪುಸಲಾಯಿಸಿ ಕತ್ತಲಲ್ಲಿ ಸ್ವಲ್ಪ ದೂರ ಕರೆದೊಯ್ದು ಲೈಂಗಿಕ ದೌರ್ಜನ್ಯವೆಸಗಿ ಪರಾರಿಯಾಗಲು ಯತ್ನಿಸಿದ್ದಾನೆ. ಬಾಲಕಿ ಸಹಾಯಕ್ಕಾಗಿ ಕೂಗಿಕೊಂಡಾಗ ಸ್ಥಳೀಯರು ಧಾವಿಸಿ ಬಾಲಕಿಯನ್ನು ರಕ್ಷಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಕೃತ್ಯಕ್ಕೊಳಗಾಗಿ ಅಘಾತಗೊಂಡ ಬಾಲಕಿಯನ್ನು ಯಲಹಂಕದ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸ್ಥಳಕ್ಕೆ ಧಾವಿಸಿದ ವಿದ್ಯಾರಣ್ಯಪುರ ಪೊಲೀಸರು ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ಆರೋಪಿ ಸೊಹೇಲ್‍ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಡಿಸಿಪಿ ಕಲಾಕೃಷ್ಣಸ್ವಾಮಿ ಅವರು ತಿಳಿಸಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

Posco pocso act ಕಾಮುಕ ದೌರ್ಜನ್ಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ