ಮಳೆ ಹಾನಿ: ಕೇಂದ್ರದಿಂದ ನೆರವಿಗೆ ಮನವಿ

Rain Damage: Requesting funds from Central government

09-07-2018

ಬೆಂಗಳೂರು: ಉಡುಪಿ, ಮಂಗಳೂರು ಸೇರಿದಂತೆ ಮಲೆನಾಡಿನಾದ್ಯಂತ ಭೀಕರ ಮಳೆ ಹಿನ್ನೆಲೆ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಈ ಕುರಿತು ನಗರದಲ್ಲಿ ಪ್ರತಿಕ್ರಿಯಿಸಿದ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್, ‘ಈ ವರ್ಷ ಅತಿ ಹೆಚ್ಚು ನಿರೀಕ್ಷೆ ಮೀರಿ ಮಳೆ ಬಂದಿದೆ. ಒಂದೆಡೆ ಮಳೆ ಯಾಗುತ್ತಿರುವುದು ಖುಷಿ, ಆದರೆ ಅತಿ ಹೆಚ್ಚು ಆಗಿರೊದು ಹಲವಾರು ಸಮಸ್ಯೆಗಳನ್ನು ತಂಡೊಡ್ಡಿದೆ. ಅಪಾರ ಆಸ್ತಿ-ಪಾಸ್ತಿಗೆ ಹಾನಿಯಾಗಿದೆ. ಈ ಭಾಗದ ಜಿಲ್ಲಾಧಿಕಾರಿಗಳು, ಎಲ್ಲ ಅಧಿಕಾರಿಗಳು, ಸದಾ ಜನರ ನೆರವಿಗೆ ಬರಲು ಸೂಚನೆ ನೀಡಲಾಗಿದೆ. ಶೀಘ್ರವೇ ದೆಹಲಿಗೆ ಹೋಗಿ ಮಳೆ ಹಾನಿ ಬಗ್ಗೆ ಮಾಹಿತಿ ಕೊಡುವೆ. ರಾಜಕೀಯ ಬಿಟ್ಟು ನೆರವು ಕೊಡುವಂತೆ ಮನವರಿಕೆ ಮಾಡಿಕೊಡಲಾಗುತ್ತದೆ ಎಂದು ಹೇಳಿದರು.

ಈಗಾಗಲೇ  ಎನ್.ಡಿ.ಆರ್.ಎಫ್ ತಂಡ ಮಳೆ ಹಾನಿ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ. ಪರಿಸ್ಥಿತಿ ಅವಲೋಕಿಸಿ ಶಾಲಾ-ಕಾಲೇಜುಗಳಿಗೆ ರಜೆ ಕೊಡಲು ಶಾಲೆಗಳಿಗೆ ಸೂಚಿಸಲಾಗಿದೆ. ಕಂಟ್ರೋಲ್ ರೂಂ ತೆರೆದು ಸದಾ ಕಾಲ ರಕ್ಷಣೆ ಕೊಡಲು ಬದ್ಧ ಎಂದರು.


ಸಂಬಂಧಿತ ಟ್ಯಾಗ್ಗಳು

control Room U.T.Khader ಎನ್.ಡಿ.ಆರ್.ಎಫ್ ರಕ್ಷಣೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ