2ನೇ ಮದುವೆ:ಪೇದೆ ಬಂಧನ

Second marriage: constable arrested

09-07-2018

ಮೈಸೂರು: ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲೇ ಹೈ ಡ್ರಾಮ ಒಂದು ನಡೆದಿತ್ತು. ಈ ಹೈಡ್ರಾಮಾಗೂ ಫೇಸ್ ಬುಕ್ ಗೂ ನಂಟಿತ್ತು. ಹೌದು, ಎರಡನೇ ಮದುವೆ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ ಪೊಲೀಸ್ ಪೇದೆಯೊಬ್ಬರು. ಮದುವೆ ಡ್ರೆಸ್ ನಲ್ಲಿಯೇ ಪೊಲೀಸ್ ಆಯುಕ್ತರ ಕಚೇರಿಗೆ ಎಳೆದು ತಂದಿದ್ದಾರೆ ಮೊದಲ ಪತ್ನಿ. ಮೈಸೂರಿನ ಯೋಗಾ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ನಡೆಯುತ್ತಿದ್ದ ಮದುವೆಯನ್ನು ತಡೆದು ನಿಲ್ಲಿಸಿ, ಮದುವೆ ಮನೆಯಲ್ಲೇ ಪೊಲೀಸಪ್ಪನಿಗೆ ಸಖತ್ ಗೂಸಾ ಕೊಟ್ಟಿದ್ದಾರೆ.

ಅಷ್ಟಕ್ಕೂ ಈ ಪೊಲೀಸ್ ಪೇದೆ ಯಾರಂತೀರಾ, ಈತ ಮೈಸೂರು ನಗರ ಸಶಸ್ತ್ರ ಮೀಸಲುಪಡೆ ಹೆಡ್ ಕಾನ್ಸ್ಟೆಬಲ್ ರಾಜಾಚಾರಿ. ಜಿಲ್ಲೆಯ ಹುಣಸೂರು ತಾಲ್ಲೂಕಿನ ಗಾಡಿ ಹೊಸಹಳ್ಳಿ ನಿವಾಸಿ ರಾಜಾಚಾರಿಗೆ ಮೊದಲ ಮದುವೆಯಾಗಿ 18ವರ್ಷಗಳಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಆದರೂ, ಫೇಸ್‌ ಬುಕ್‌ ನಲ್ಲಿ ಪರಿಚಯವಾದ ಮಹಿಳೆಯೊಂದಿಗೆ ಮದುವೆಯಾಗುವಾಗ ಸಿಕ್ಕಿಬಿದ್ದಿದ್ದಾರೆ.  

ತನಗೆ ತಿಳಿಯದೆ ಡೈವರ್ಸ್ ಪತ್ರಕ್ಕೆ ಸಹಿ ಹಾಕಿಸಿಕೊಂಡಿದ್ದಾನೆ. ಪ್ಲಾನ್ ಮಾಡಿ ಮೂರೇ ತಿಂಗಳಲ್ಲಿ ಡೈವೋರ್ಸ್ ಪಡೆದಿದ್ದಾನೆ ಎಂದು ಮೊದಲ ಪತ್ನಿ ಸವಿತಾ ಅವರು, ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸ್ ವೃತ್ತಿ ಜೊತೆಗೆ ಲೇವಾದೇವಿ ನಡೆಸುತ್ತಿದ್ದ ರಾಜಾಚಾರಿ. ನನಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಪೊಲೀಸ್ ಆಯುಕ್ತರ ಕಚೇರಿಯಲ್ಲೇ ಈ ವಿಚಾರವಾಗಿ ರಾಜಿ ಮಾಡಿಸುವ ವೇಳೆ ಗಂಡನನ್ನು ಎಳೆದಾಡಿ ರಂಪಾಟ ಮಾಡಿದ್ದಾರೆ ಮೊದಲ ಪತ್ನಿ. ದೂರು ಸಂಬಂಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Constable commissioner ರಂಪಾಟ ಡೈವೋರ್ಸ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ