ಕೋಲಾರದ ಶ್ರೀನಿವಾಸಪುರ ಬಂದ್

Kolar: srinivaspur town bandh today

09-07-2018

ಕೋಲಾರ: ಮಾವು ಬೆಳೆಗಾರರ ನೆರವಿಗೆ ರಾಜ್ಯ ಸರ್ಕಾರ ಮಧ್ಯಪ್ರವೇಶ ಮಾಡಿ ಬೆಂಬಲ ಬೆಲೆ ನೀಡಬೇಕು ಎಂದು ಆಗ್ರಹಿಸಿ ಇಂದು ಶ್ರೀನಿವಾಸಪುರ ಪಟ್ಟಣ ಬಂದ್ ಮಾಡಲಾಗಿದೆ. ಮಾವು ಬೆಳೆಗಾರರು, ಹಾಗೂ ಮಾವು ಖರೀದಿ ಸಂಘದವರು ಸಹ ಬಂದ್ ಗೆ ಸಾಥ್ ನೀಡಿದ್ದಾರೆ. ಈ ಬಾರಿ  ಮಾವು ಬೆಳೆಗೆ ಉತ್ತಮ ಬೆಲೆ ಇಲ್ಲದಾಗಿ ರೈತರು ಸಂಕಷ್ಟದಲ್ಲಿದ್ದು, ವ್ಯಾಪಾರಿಗಳು ಮಾವನ್ನು ಕೊಳ್ಳಲು ಮುಂದೆ ಬರುತ್ತಿಲ್ಲ, ಹೀಗಾಗಿ ಬೆಳೆಗಾರರು ಆತಂಕಗೊಂಡಿದ್ದಾರೆ. ಇದೀಗ ಮಾವು ಬೆಳೆಗಾರರು ಸರ್ಕಾರದ ನೆರವು ಕೋರಿ ಪ್ರತಿಭಟಿಸುತ್ತಿದ್ದಾರೆ. ಶ್ರೀನಿವಾಸಪುರ ಪಟ್ಟಣದಲ್ಲಿ ಬೆಳಿಗ್ಗೆಯಿಂದಲೆ ಅಂಗಡಿ ಮುಂಗಟ್ಟು, ಹೊಟೇಲ್ ಮುಚ್ಚಲಾಗಿದೆ. ಪಟ್ಟಣದಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿದೆ. ಮಾವು ಬೆಳೆಗಾರರಿಂದ ಬಂದ್ ಸಹಕರಿಸುವಂತೆ ಮನವಿ ಬಂದ್ ಹಿನ್ನೆಲೆ ಬಿಗಿ ಪೊಲೀಸ್ ಬಂದೊಬಸ್ತ್ ಮಾಡಲಾಗಿದೆ.


ಸಂಬಂಧಿತ ಟ್ಯಾಗ್ಗಳು

Farmers Mango ಬೆಂಬಲ ಬೆಲೆ ಹೊಟೇಲ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ