ಜಿಎಸ್‍ಟಿ ತೆರಿಗೆ ವಿರೋಧಿಸಿ ಮೇ 30ರಂದು ಹೋಟೆಲ್‍ಗಳು ಬಂದ್ !

Kannada News

29-05-2017

ಬೆಂಗಳೂರು:- ಕೇಂದ್ರ ಸರ್ಕಾರ ವಿಧಿಸುತ್ತಿರುವ ಜಿಎಸ್‍ಟಿ ತೆರಿಗೆ ವಿರೋಧಿಸಿ ಮೇ 30ರಂದು ಹೋಟೆಲ್‍ಗಳು, ಲಾಡ್ಜ್ ಗಳು ಸಂಪೂರ್ಣ ಬಂದ್ ಆಚರಿಸುತ್ತಿವೆ. ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಬೃಹತ್ ಬೆಂಗಳೂರು ಹೋಟೆಲ್‍ಗಳ ಸಂಘ, ತೆರಿಗೆ ಜಾರಿಯಿಂದ ಗ್ರಾಹಕರ ಮೇಲೆ ಆರ್ಥಿಕ ಹೊರೆ ಬೀಳುತ್ತಿದೆ ಎಂದು ಹೇಳಿದೆ. ಹೋಟೆಲ್ ಮತ್ತು ರೆಸ್ಟೋರೆಂಟ್‍ಗಳಲ್ಲಿ 100 ರೂ. ಬಿಲ್‍ಗೆ ಗ್ರಾಹಕರು 12 ರೂ. ಹೆಚ್ಚುವರಿಯಾಗಿ ಪಾವತಿಸಬೇಕಿದೆ. ಪಾರ್ಸಲ್ ಪಡೆಯುವವರು 18 ರೂ. ಹೆಚ್ಚುವರಿ ಹಣ ಕೊಡಬೇಕು, ಇದು ಜನಸಾಮಾನ್ಯರ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದಿದ್ದಾರೆ. ಹೋಟೆಲ್‍ಗೆ ಬರುವ ಗ್ರಾಹಕರ ಸಂಖ್ಯೆ ಹೆಚ್ಚಿದೆ. ಆದರೆ ಈ ವಲಯಕ್ಕೆ ವಿನಾಯಿತಿ ನೀಡಿಲ್ಲ ಮತ್ತು ಲಾಡ್ಜ್ ಗಳಿಗೆ ತೆರಿಗೆಯಲ್ಲಿ ಸ್ವಲ್ಪ ವಿನಾಯಿತಿ ನೀಡಿದ್ದು, ಅಲ್ಲಿಗೆ ಬರುವ ಗ್ರಾಹಕರ ಸಂಖ್ಯೆ ತೀರಾ ಕಡಿಮೆ ಇದೆ. ತೆರಿಗೆ ಜಾರಿಗೂ ಮೊದಲೇ ಕೇಂದ್ರ ಸರ್ಕಾರಕ್ಕೆ ಈ ಕುರಿತು ಮನವಿ ಸಲ್ಲಿಸಿದ್ದರೂ ಪರಿಗಣಿಸಿಲ್ಲ ಎಂದು ಸಂಘ ದೂರಿದ್ದಾರೆ.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ