ಸಿಎಂ ಕುಮಾರಸ್ವಾಮಿ ವಿರುದ್ಧ ಈಶ್ವರಪ್ಪ ಗರಂ

BJP Leader K.S.Eshwarappa angry on cm kumaraswamy

07-07-2018

ಶಿವಮೊಗ್ಗ: ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಗರಂ ಆಗಿದ್ದಾರೆ. ವಿಪಕ್ಷ ಶಾಸಕ ನಡಹಳ್ಳಿ ಅವರು 'ಉತ್ತರ ಕರ್ನಾಟಕಕ್ಕೆ ಬಜೆಟ್ ನಲ್ಲಿ ಶೂನ್ಯ ಕೊಡುಗೆ' ಎಂದು ಸದನದಲ್ಲಿ ಹೇಳಿಕೆ ನೀಡಿದ್ದರು. ಅದಕ್ಕೆ ಪ್ರತಿಕ್ರಿಯೆಯಾಗಿ ಸಿಎಂ ಕುಮಾರಸ್ವಾಮಿ ಶಾಸಕರಿಗೆ ಕೆಲಸ ಇಲ್ಲ ಎಂದು ಹೇಳಿದ್ದರು. ಈ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ ಈಶ್ವರಪ್ಪ.

‘ಸಿಎಂ ಆಗಿ ಅವರಿಗೆ ಯಾವ ಕೆಲಸವಿದೆ. ರಾಜ್ಯದ ಸಮಸ್ಯೆ ಬಗ್ಗೆ ಕೇಳಿದರೆ ಇಂತಹ ಉತ್ತರ ನೀಡಿದ್ದು ಸರಿಯಲ್ಲ. ಸಿಎಂ ಹಲ್ಲು ಬಿಗಿ ಹಿಡಿದು ಮಾತನಾಡಬೇಕು ಎಂದು ಕುಮಾರಸ್ವಾಮಿ ಅವರಿಗೆ ಎಚ್ಚರಿಕೆ ನೀಡಿದ್ದಾರೆ.

ದೇವೇಗೌಡರ, ಕುಮಾರಸ್ವಾಮಿಯವರ, ಹೆಚ್.ಡಿ.ರೇವಣ್ಣ ಅವರ ಆಸ್ತಿ ಕುರಿತು ನಡಹಳ್ಳಿ ಅವರು ಯಾವುದೇ ಪ್ರಶ್ನೆ ಕೇಳಿಲ್ಲ. ರಾಜ್ಯದ ಬಜೆಟ್ ವೈಫಲ್ಯದ ಕುರಿತು ವಿಪಕ್ಷ ಶಾಸಕ ಪ್ರಶ್ನೆ  ಮಾಡಿದ್ದಾರೆ. ಅದಕ್ಕೆ ಸಿಎಂ ಆಗಿ ವ್ಯವಧಾನದಿಂದ ಉತ್ತರಿಸುವ ಗುಣ ಕಲಿತುಕೊಳ್ಳಬೇಕು ಎಂಬ ಸಲಹೆಯನ್ನೂ ನೀಡಿದ್ದಾರೆ. ರಾಜ್ಯದ ಇತಿಹಾಸದಲ್ಲೇ ಆಡಳಿತ ಪಕ್ಷದ ಶಾಸಕ ಕಾಂಗ್ರೆಸ್ ಹಿರಿಯ ಮುಖಂಡ ಹೆಚ್.ಕೆ.ಪಾಟೀಲ್, ಸಿಎಂ ಮತ್ತು ಸಮನ್ವಯ ಸಮಿತಿಗೆ ಬಜೆಟ್ ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಪತ್ರ ಬರೆಯುತ್ತಾರೆ. ಇದು ಕಾಂಗ್ರೆಸ್ ಪಕ್ಷದ ಇತಿಹಾಸದಲ್ಲೇ ಪ್ರಥಮ ಎಂದರು.

ಇನ್ನು ಸಿದ್ದರಾಮಯ್ಯ ಅವರು ತಮ್ಮ  ಕ್ಷೇತ್ರಕ್ಕೆ ವಿಶೇಷ ಅನುದಾನ ಕೇಳಿದರೂ ನೀಡದ ಸಿಎಂ, ಅವರಿಗೆ ಅವಮಾನ ಮಾಡಿದ್ದಾರೆ. ಆಡಳಿತ ಪಕ್ಷದ ಶಾಸಕ, ಸಚಿವರಿಗೇ ಬಜೆಟ್ ತೃಪ್ತಿ ತಂದಿಲ್ಲ. ಬಜೆಟ್ ಸಂಪೂರ್ಣ ಗೊಂದಲದ ಗೂಡಾಗಿದೆ. ಪೆಟ್ರೋಲ್, ಡೀಸಲ್ ಇತರೆ ವಸ್ತುಗಳ ಬೆಲೆ ಏರಿಕೆ ಮಾಡಿ, ಅಲ್ಪಸ್ವಲ್ಪ ರೈತರ ಸಾಲಮನ್ನಾ ಮಾಡುವುದಕ್ಕೆ ಸಿಎಂ ಅಗತ್ಯವಿರಲಿಲ್ಲ ಎಂದು ಕಿಡಿಕಾರಿದ್ದಾರೆ.


ಸಂಬಂಧಿತ ಟ್ಯಾಗ್ಗಳು

K.S.Eshwarappa A.S patil nadahalli ಕರ್ನಾಟಕ ಅನ್ಯಾಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ