‘ನಮ್ಮದು ಅಖಂಡ ಕರ್ನಾಟಕ, ವಿಭಜನೆ ಮಾಡಲು ಬಿಡಲ್ಲ’

Agriculture minister shivashankar reddy reaction on BJP allegations on budget

07-07-2018

ಬೆಳಗಾವಿ: ‘ಈ ಬಾರಿಯ ಬಜೆಟ್ ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿಲ್ಲ. ಹಾಗೇನಾದರೂ ಆಗಿದ್ದರೆ ಎಲ್ಲರೂ ಸೇರಿಕೊಂಡು ಚಿಂತನೆ ನಡೆಸಿ ಮುಂದಿನ ದಿನಗಳಲ್ಲಿ ಹೆಚ್ಚಿನ ಆದ್ಯತೆ ನೀಡೋಣ. ಇದು ಫೈನಲ್ ಬಜೆಟ್ ಅಲ್ಲ, ಮತ್ತೆ ಸಪ್ಲಿಮೆಂಟರಿ ಬಜೆಟ್ ನಲ್ಲಿ ನ್ಯಾಯ ಒದಗಿಸೋಣ’ ಎಂದು ಬೆಳಗಾವಿಯಲ್ಲಿ ಕೃಷಿ ಸಚಿವ ಶಿವಶಂಕರ ರೆಡ್ಡಿ ಹೇಳಿದ್ದಾರೆ.

ಬಜೆಟ್ ವಿಚಾರವಾಗಿ ಮಾಜಿ ಸಚಿವ ಹೆಚ್‌.ಕೆ.ಪಾಟೀಲ್ ಅಸಮಾಧಾನ ಹಿನ್ನೆಲೆ, ‘ಹೆಚ್.ಕೆ‌.ಪಾಟೀಲ್ ಅವರು ಯಾವ ಆಧಾರದ ಮೇಲೆ‌ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದಿದ್ದಾರೊ ಗೊತ್ತಿಲ್ಲ. ಅವರು ದೊಡ್ಡವರು ಅವರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ' ಎಂದರು.

ಬಜೆಟ್ ವಿಚಾರವಾಗಿ ವಿರೋಧ ಪಕ್ಷದವರು ದೊಡ್ಡದಾಗಿ ಹೇಳಿ ಅದಕ್ಕೆ ಬಣ್ಣ ಹಚ್ಚುತ್ತಿದ್ದಾರೆ, 34ಸಾವಿರ ಕೋಟಿ ರೈತರ ಸಾಲಾ‌ ಮನ್ನಾ ಮಾಡಿದ್ದೇವೆ, ಅದು ಹಾಸನ, ಮೈಸೂರು ರೈತರಿಗಷ್ಟೇ ಇಲ್ಲ ಈಡೀ ರಾಜ್ಯದ ರೈತರಿಗೆ ಅನುಕೂಲವಾಗಿದೆ ಎಂದು ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

‘ಉತ್ತರ ಕರ್ನಾಟಕ ವಿಭಜನೆ ಮಾಡಲು ಬಿಡುವುದಿಲ್ಲ. ನಮ್ಮದು ಅಖಂಡ ಕರ್ನಾಟಕ, ಯಾರೋ ಒಬ್ಬರು ಆ ರೀತಿ ಕೂಗೆತ್ತಿದರೆ ಜನರು ಇದಕ್ಕೆ ತಲೆ ಕೆಡಿಸಿಕೊಳ್ಳಬಾರದು ಎಂದು ಖಡಕ್ ಉತ್ತರ ನೀಡಿದರು. ಬಜೆಟ್ ನಿಂದ ಕೆಲವರಿಗೆ ಅಸಮಾಧಾನ ಇರುತ್ತೆ ಅವರ ಹೇಳಿಕೆಗಳಿಂದ ಸರ್ಕಾರಕ್ಕೆ ಯಾವುದೇ ಡ್ಯಾಮೇಜ್ ಆಗುವುದಿಲ್ಲ. ಬಜೆಟ್ ನಿಂದ ನಮ್ಮ ಸಮ್ಮಿಶ್ರ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಸುಭದ್ರವಾಗಿ ಐದು ವರ್ಷ ನಮ್ಮ ಸರ್ಕಾರ ನಡೆಯುತ್ತದೆ ಎಂದು ಹೇಳಿದರು.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ