ಪೆರುಂಬಾಡಿ-ಮಾಕುಟ್ಟ ರಸ್ತೆ ಸಂಚಾರಕ್ಕೆ ಮುಕ್ತ

After 20 days perumbadi-makutta road opened for vehicles

07-07-2018

ಮಡಿಕೇರಿ: ಭಾರೀ ಮಳೆ ಹಿನ್ನೆಲೆ ಬಂದ್ ಮಾಡಿದ್ದ ಅಂತರರಾಜ್ಯ ಹೆದ್ದಾರಿ ರಸ್ತೆ 20 ದಿನಗಳ ಬಳಿಕ ಸಂಚಾರಕ್ಕೆ ಮುಕ್ತವಾಗಿದೆ. ಮಡಿಕೇರಿಯ ಪೆರುಂಬಾಡಿ-ಮಾಕುಟ್ಟ ರಸ್ತೆಯಲ್ಲಿ ಲಘು ವಾಹನ ಸಂಚಾರಕ್ಕೆ ಅವಕಾಶ ಮಾಡಲಾಗಿದೆ. ಮಡಿಕೇರಿಯಲ್ಲಿ ಕಳೆದ ತಿಂಗಳ ಜೂನ್ 2ನೇ ವಾರದದಲ್ಲಿ ಸುರಿದ ಧಾರಾಕಾರ ಮಳೆಗೆ, ಪೆರಂಬಾಡಿ-ಮಾಕುಟ್ಟ ಭಾಗದಲ್ಲಿ ಗುಡ್ಡಗಳ ಕುಸಿತ, ಮರಗಳು ರಸ್ತೆಗೆ ಉರುಳಿ ಬಿದ್ದು, ಸೇತುವೆ ಕುಸಿದು ಆತಂಕ ಸೃಷ್ಟಿಸಿತ್ತು. ಇದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ವಾಹನಗಳ ಸಂಚಾರ ನಿಷೇಧಿಸಿ ಮಡಿಕೇರಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಸದ್ಯ ಪರಿಸ್ಥಿತಿ ಹತೋಟಿಗೆ ಬಂದ ಹಿನ್ನೆಲೆ ಲಘು ವಾಹನಗಳ ಸಂಚಾರಕ್ಕೆ ಡಿಸಿ ಸೂಚಿಸಿದ್ದಾರೆ. ಅಲ್ಲದೆ ಅರಣ್ಯ ಭಾಗದ ರಸ್ತೆಯಲ್ಲಿ ವಾಹನ ನಿಲುಗಡೆಗೆ ಕಡ್ಡಾಯ ನಿಷೇಧಿಸಲಾಗಿದೆ. ಭಾರೀ ವಾಹನಗಳು ಗೋಣಿಕೊಪ್ಪ-ಶ್ರೀಮಂಗಲ-ಕುಟ್ಟ ಮಾರ್ಗದಲ್ಲಿ ಸಂಚಾರಕ್ಕೆ ಅನುವು ಮಾಡಲಾಗಿದೆ.  ಕೇರಳ ಹಾಗೂ ಕೊಡಗು ಅಧಿಕಾರಿ ಮತ್ತು ಸಿಬ್ಬಂದಿಗಳಿಂದ ಉತ್ತಮ ಸ್ಪಂದನೆ ಹಿನ್ನೆಲೆ ರಸ್ತೆಗೆ ಬಿದ್ದಿದ್ದ ಮರಗಳು ಹಾಗೂ ಮಣ್ಣು ತೆರವು ಕಾರ್ಯಾಚರಣೆ ತ್ವರಿತವಾಗಿ ಪೂರ್ಣಗೊಂಡಿದೆ. ಮಾಕುಟ್ಟ ಭಾಗದಲ್ಲಿ ಸಾರಿಗೆ, ಆರಕ್ಷಕ, ಅರಣ್ಯ, ಪಿಡಬ್ಲೂಡಿ ಯಿಂದ 24×7ಗಸ್ತು ತಿರುಗಲು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಆದೇಶ ನೀಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Kodagu Rain ಅಂತರರಾಜ್ಯ ಸೇತುವೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ