ಯುವಕರಿಬ್ಬರ ಸಾವಿಗೆ ಕಾರಣವಾಯ್ತು ಅತಿ ವೇಗ

2 young guys spot dead in a accident

06-07-2018

ಬೆಂಗಳೂರು: ನಗರದ ಹೊರವಲಯದ ಅತ್ತಿಬೆಲೆ ಬಳಿ ನಿನ್ನೆ ಸ್ನೇಹಿತನ ಮನೆಯಲ್ಲಿ ಪಾರ್ಟಿ ಮುಗಿಸಿಕೊಂಡು ವೇಗವಾಗಿ ಸ್ಕೂಟರ್ ನಲ್ಲಿ ಹೋಗುತ್ತಿದ್ದ ಇಬ್ಬರು ಯುವಕರು ರಸ್ತೆ ಅಪಘಾತದಲ್ಲಿ  ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ತಮಿಳುನಾಡಿನ ಸೇಲಂನ ಚೆನ್ನಮಾರಪಟ್ಟಿಯ ಅಜಿತ್ (21) ಹಾಗೂ ಹೊಸೂರಿನ ಕಾಮರಾಜನಗರದ ಸೂರ್ಯ (27)ಎಂದು ಮೃತಪಟ್ಟವರನ್ನು ಗುತಿಸಲಾಗಿದೆ. ಹೊಸೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅಜಿತ್ ಟೀ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸೂರ್ಯ ಇಬ್ಬರು ಸ್ನೇಹಿತರಾಗಿದ್ದರು.

ಇವರಿಬ್ಬರೂ ರಾತ್ರಿ ಸ್ನೇಹಿತನ ಮನೆಯಲ್ಲಿ ಪಾರ್ಟಿ ಮುಗಿಸಿಕೊಂಡು ಮಧ್ಯರಾತ್ರಿ 2.30ರ ವೇಳೆ ಯಮಹಾ ಸ್ಕೂಟರ್‍ನಲ್ಲಿ ಅತ್ತಿಬೆಲೆ ಬಳಿಯ ನೆರಳೂರು ರಸ್ತೆಯಲ್ಲಿ ಅತಿವೇಗವಾಗಿ ಹೋಗುತ್ತಿದ್ದರು.

ಮುಂದೆ ಹೋಗುತ್ತಿದ್ದ ವಾಹನಕ್ಕೆ ಸ್ಕೂಟರ್ ಡಿಕ್ಕಿ ಹೊಡೆಯಿತೋ ಬೇರೆಂದೂ ವಾಹನ ಡಿಕ್ಕಿ ಹೊಡೆಯಿತೋ ಎನ್ನುವುದು ಗೊತ್ತಾಗಿಲ್ಲ ಡಿಕ್ಕಿಯ ರಭಸಕ್ಕೆ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದು ಸ್ಕೂಟರ್ ಸಂಪೂರ್ಣ ಜಖಂಗೊಂಡಿದೆ. ಮೃತ ಇಬ್ಬರು ಪಾನಮತ್ತರಾಗಿದ್ದು ಹೆಲ್ಮೆಟ್ ಹಾಕಿರಲಿಲ್ಲ ಪ್ರಕರಣ ದಾಖಲಿಸಿಕೊಂಡಿರುವ ಅತ್ತಿಬೆಲೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

accident speed limit ಸ್ನೇಹಿತ ಸ್ಕೂಟರ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ