ಸಂವಿಧಾನ ಬಿಕ್ಕಟ್ಟು ಉಂಟಾಗುತ್ತಿತ್ತು: ಹಂಗಾಮಿ ಸಭಾಪತಿ ಹೊರಟ್ಟಿ

The constitutional crisis was caused:Basavaraj horatti

06-07-2018

ಬೆಂಗಳೂರು: ಖಾಯಂ ಸಭಾಪತಿ ಆಯ್ಕೆ ಆಗೋವರೆಗೂ ಹಂಗಾಮಿ ಸಭಾಪತಿ ಕಾರ್ಯ ನಿರ್ವಹಿಸಬಹುದು. ತಮಗೆ ಹೇಗೆ ಬೇಕೋ ಹಾಗೇ ರಾಜಕೀಯ ಮಾಡೋದು ಸರಿಯಲ್ಲ. ಉತ್ತರ ಪ್ರದೇಶದಲ್ಲಿ ಹಂಗಾಮಿ ಸಭಾಪತಿ ಎರಡು ವರ್ಷ ಕಾರ್ಯ ನಿರ್ವಹಿಸಿದ್ದರು. ಸಭಾಪತಿಯಾಗಿ ನನ್ನನ್ನ ಮುಂದುವರೆಸಬೇಕು ಎಂದು ತೀರ್ಮಾನ ಮಾಡಿದರೆ ನಾನು ಮುಂದುವರೆಯುತ್ತೇನೆ ಎಂದು ವಿಧಾನ ಪರಿಷತ್ ನ ಹಂಗಾಮಿ ಸಭಾಪತಿ ಬಸವರಾಜ ಹೊರಟ್ಟಿ ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ನೈತಿಕತೆ ಇದ್ದರೆ ಸ್ಥಾನದಿಂದ ಕೆಳಗೆ ಇಳಿಯಿರಿ ಎಂದರು. ಆ ರೀತಿ ನಾನು ರಾಜೀನಾಮೆ ಕೊಟ್ಟಿದ್ದರೆ ಸಂವಿಧಾನ ಬಿಕ್ಕಟ್ಟು ಎದುರಾಗುತ್ತಿತ್ತು. ಇಷ್ಟು ದಿನ ನಡೆದ ಕಾರ್ಯಕಲಾಪ ರದ್ದು ಆಗುತ್ತಿತ್ತು. ಹೀಗಾಗಿಯೇ ಈ ವಿಚಾರ ಸದನದಲ್ಲಿ ಚರ್ಚೆ ಮಾಡಲು ಬಿಟ್ಟಿದ್ದೆ ಎಂದು ಬಸವರಾಜ ಹೊರಟ್ಟಿ ತಿಳಿಸಿದರು.


ಸಂಬಂಧಿತ ಟ್ಯಾಗ್ಗಳು

Basavaraj horatti vidhana parishad ಹಂಗಾಮಿ ನೈತಿಕತೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ