ಗಂಡನಿಂದ-ವರದಕ್ಷಿಣೆ, ಮಾವನಿಂದ-ಲೈಂಗಿಕ ಕಿರುಕುಳ

Dowry and Sexual harassment on a women at bengaluru

06-07-2018

ಬೆಂಗಳೂರು: ಮದುವೆಯಾಗಿ ಕೇವಲ 7 ತಿಂಗಳು ಕಳೆಯುವ ವೇಳೆಗೆ ಮಹಿಳೆಯೊಬ್ಬರು ಪತಿಯ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ಮಾವನ ವಿರುದ್ಧ ಲೈಂಗಿಕ ಕಿರುಕುಳ ನೀಡಿ ಜೆಸಿ ನಗರ ಪೊಲೀಸರಿಗೆ ದೂರು ನೀಡಿದ್ದಾರೆ.

ಜೆಸಿ ನಗರದ ತಸ್ಲೀಮಾ (ಹೆಸರು ಬದಲಾಯಿಸಲಾಗಿದೆ) ಎಂಬ ಮಹಿಳೆ ತನ್ನ ಮಾವ ಅಬ್ದುಲ್ ರೆಹಮಾನ್ ಇಲಿಯಾಸ್ ಮತ್ತು ಗಂಡ ಅಬ್ದುಲ್ ಹದಿ ವಿರುದ್ಧ ನೀಡಿರುವ ದೂರು ದಾಖಲಿಸಿರುವ  ಪೊಲೀಸರು, ಮಾವ ಅಬ್ದುಲ್ ರೆಹಮಾನ್ ನನ್ನು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.

ಮಾವ ಅಬ್ದುಲ್ ರೆಹಮಾನ್, ಇಲಿಯಾಸ್ ಲೈಂಗಿಕ ಕಿರುಕುಳ ನಡೆಸಿದ್ದಾನೆ ಎಂದು ತಸ್ಲೀಮಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಬ್ದುಲ್ ರೆಹಮಾನ್ ಇಲಿಯಾಸ್ ನನ್ನನ್ನು ರೂಮಿಗೆ ಕರೆದೊಯ್ದು ಬಟ್ಟೆ ಬಿಚ್ಚಿ ಅಸಭ್ಯವಾಗಿ ವರ್ತಿಸಿದ್ದಾನೆ. ಅಷ್ಟೇ ಅಲ್ಲದೇ ನಿನ್ನ ಮೊದಲ ರಾತ್ರಿಯ ಅನುಭವ ಹೇಳು ಎಂದು ವಿಕೃತ ಕಿರುಕುಳ ನೀಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಬಟ್ಟೆ ಬಿಚ್ಚಿ ಕಿರುಕುಳ: ಕಳೆದ ವರ್ಷ ಡಿಸೆಂಬರ್ 28ರಂದು ಅಬ್ದುಲ್ ಹದಿ ಎಂಬುವನ ಜೊತೆ ಮದುವೆಯಾಗಿತ್ತು. ಎರಡು ಲಕ್ಷ ವರದಕ್ಷಿಣೆ ಮತ್ತು ಆಭರಣಗಳೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಮದುವೆ ವೇಳೆ ಪದವಿ ಪಡೆದು ಒಳ್ಳೆ ಕೆಲಸದಲ್ಲಿದ್ದಾನೆಂದು ಅಬ್ದುಲ್ ಹದಿ ಮನೆಯವರು ಹೇಳಿದ್ದರು. ಆದರೆ ಅಸಲಿಗೆ ಅನಕ್ಷರಸ್ಥನಾಗಿರುವ ಅಬ್ದುಲ್ ಹದಿ ನಕಲಿ ಪದವಿ ಸರ್ಟಿಫಿಕೇಟ್ ಮಾಡಿಸಿಕೊಂಡಿದ್ದ ಎಂದು ತಸ್ಲೀಮಾಗೆ ಮದುವೆಯಾದ ನಂತರ ಗೊತ್ತಾಗಿದೆ.

ಒಂದು ಕಡೆ ಮಾವ ಲೈಂಗಿಕ ಕಿರುಕುಳ ನೀಡುತ್ತಿದ್ದರೆ ಮತ್ತೊಂದೆಡೆ ಗಂಡ ಅಬ್ದುಲ್ ಹದಿ ಮಾನಸಿಕ, ದೈಹಿಕ ಕಿರುಕುಳ ನೀಡಿದ್ದಾನೆ ಎಂದು ತಸ್ಲೀಮಾ ದೂರಿದ್ದಾರೆ. ಎರಡು ತಿಂಗಳ ಹಿಂದೆ ತಸ್ಲೀಮಾಳನ್ನು ಗಂಡ ಮತ್ತು ಮಾವ ಇಬ್ಬರೂ ಹೊಡೆದು ಮನೆಯಿಂದ ಹೊರ ಹಾಕಿದ್ದು, ನೊಂದ ಮಹಿಳೆ ಜೂನ್ 23ರಂದು ಜೆಸಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.


ಸಂಬಂಧಿತ ಟ್ಯಾಗ್ಗಳು

Sexual harassment Dowry ಅನುಭವ ವರದಕ್ಷಿಣೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ