ಬಯಲಾಯ್ತು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅಕ್ರಮ ಆಸ್ತಿ

Irrigation Corporation: ACB Raid on Assistant Executive Engineer

06-07-2018

ಬೆಂಗಳೂರು: ಬಾಗಲಕೋಟೆ ಜಿಲ್ಲೆ ಸವದತ್ತಿಯ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರ ಶಿವಲಿಂಗಪ್ಪ ಬಸ್ಪಪ್ಪ ಹಡಗಲಿ ಅವರ ಕಚೇರಿ ನಿವಾಸದ ಮೇಲೆ ಏಕಕಾಲದ ದಾಳಿ ನಡೆಸಿರುವ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ಅಧಿಕಾರಿಗಳು ಸುಮಾರು 40ಲಕ್ಷ ನಗದು 6 ನಿವೇಶನ 28 ಎಕರೆಗೆ ಧಣಿಯಾಗಿರುವುದನ್ನು ಪತ್ತೆಹಚ್ಚಿದ್ದಾರೆ.

ಹಡಗಲಿ ಅವರು ಬಾಗಲಕೋಟೆಯ ನವನಗರದಲ್ಲಿ 1ಮನೆ 1 ನಿವೇಶನ, ಯರಗಟ್ಟಿಯಲ್ಲಿ 1 ಮನೆ 4 ನಿವೇಶನ, ಬೈಲಹೊಂಗಲ ಬಸವನಕುಡಚಿಯಲ್ಲಿ 1 ನಿವೇಶನ, ತೋಂಡಿಹಾಳ ಇಳಕಲ್‍ನಲ್ಲಿ 2 ಪ್ಲಾಟ್‍ಗಳು, ಸವದತ್ತಿಯ ವಿವಿಧ ಸರ್ವೆ ನಂಬರಗಳಲ್ಲಿ 38 ಎಕರೆ ಕೃಷಿ ಜಮೀನು, ಚಿನ್ನ 276 ಗ್ರಾಂ, ಬೆಳ್ಳಿ 832 ಗ್ರಾಂ, 1 ಮಹಿಂದ್ರಾ ಜೀಪ್, 2 ದ್ವಿಚಕ್ರ ವಾಹನ, ನಗದು 55 ಸಾವಿರ ಹಾಗೂ ಬ್ಯಾಂಕ್ ಖಾತೆಯಲ್ಲಿ 39.88 ಲಕ್ಷ ಮತ್ತು 2 ಲಕ್ಷ ಗೃಹೋಪಯೋಗಿ ವಸ್ತುಗಳನ್ನು ಹೊಂದಿ ಐಷಾರಾಮಿ ಜೀವನ ನಡೆಸುತ್ತಿರುವುದು ಪತ್ತೆಯಾಗಿದೆ.

ಹಡಗಲಿ ಅವರು ಅಕ್ರಮ ಆಸ್ತಿ ಹೊಂದಿರುವ ಬಗ್ಗೆ ಹಲವು ದೂರುಗಳು ಬಂದ ಹಿನ್ನಲೆಯಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿ ಶೋಧ ನಡೆಸಿದಾಗ ಆದಾಯಕ್ಕಿಂತ ನೂರಾರು ಪಟ್ಟು ಅಕ್ರಮ ಆಸ್ತಿ ಹೊಂದಿರುವುದು ಪತ್ತೆಯಾಗಿದೆ ಎಂದು ಅಧಿಕಾರಿಗಳ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Executive Engineer ACB ಭ್ರಷ್ಟಾಚಾರ ಅಕ್ರಮ ಆಸ್ತಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ