15 ದಿನಗಳಿಂದ ಮೋರಿಯಲ್ಲಿ ಕೊಳೆಯುತ್ತಿತ್ತು ವ್ಯಕ್ತಿ ಶವ!

Dead body was found in a drainage!

06-07-2018

ಬೆಂಗಳೂರು: ಮಳೆಗಾಲದಲ್ಲಿ ನಗರದ ಮೋರಿಗಳಿಂದ ಗಾಯಗೊಳ್ಳುವುದು ಪ್ರಾಣ ಕಳೆದುಕೊಳ್ಳುವುದು ನಡೆಯುತ್ತಲೇ ಇದೇ. ಆದರೆ, ಹೆಣ್ಣೂರು ಬಂಡೆಯ ಬಳಿ ನಡೆದು ಹೋಗುವಾಗ ಮೋರಿಯೊಳಗೆ ಬಿದ್ದು ಸಾವನ್ನಪ್ಪಿದ್ದ ವ್ಯಕ್ತಿಯ ಶವ ಬರೋಬ್ಬರಿ 15 ದಿನಗಳ ನಂತರ ಪತ್ತೆಯಾಗಿರುವುದು ಮೋರಿಗಳ ನಿರ್ವಹಣೆಗೆ ಯಾವ ರೀತಿ ಇದೆ ಎಂಬುದಕ್ಕೆ ಸಾಕ್ಷಿಯಾಗಿದೆ.

ಹೆಣ್ಣೂರು ಬಂಡೆ ನಿಲ್ದಾಣದ ಬಳಿ ಮೋರಿಯಲ್ಲಿ ದುರ್ವಾಸನೆ ಬರುತ್ತಿದ್ದುದನ್ನು ಗಮನಿಸಿದ ಸ್ಥಳೀಯರು ಪರಿಶೀಲಿಸಿದಾಗ ವ್ಯಕ್ತಿಯೊಬ್ಬನ ಮೃತ ದೇಹ ಪತ್ತೆಯಾಗಿದೆ. ಸ್ಥಳದಲ್ಲೇ ಇದ್ದ ಮನೆಯೊಂದರಲ್ಲಿ ಅಳವಡಿಸಿದ್ದ ಸಿಸಿಟಿವಿಯನ್ನು ಪರಿಶೀಲಿಸಿದಾಗ 15 ದಿನಗಳ ಹಿಂದೆ ವ್ಯಕ್ತಿಯು ಮೋರಿಯೊಳಗೆ ಬಿದ್ದಿರುವುದು ಕಂಡುಬಂದಿದೆ.

ಪತ್ತೆಯಾದ ಮೃತದೇಹ ಶೇಖರ್(45)ನದ್ದು ಎಂದು ಗುರುತಿಸಲಾಗಿದೆ. ಹೆಣ್ಣೂರಿನ ಶೇಖರ್ ಪತ್ನಿ ಆತ್ಮಹತ್ಯೆ ಮಾಡಿಕೊಂಡ ನಂತರ ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದ ಶೇಖರ್ ಹೆಣ್ಣೂರು ಬಂಡೆ ಬಸ್ ಸ್ಟಾಪ್ ಬಳಿಯ ಮೋರಿ ಬಳಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಮೋರಿಯ ಒಳಗೆ ಬಿದ್ದಿದ್ದ.

ಮೋರಿಯ ಒಂದು ಕಡೆ ಕಾಂಕ್ರೀಟ್ ಸ್ಲಾಬ್ ಹಾಕದೇ ತೆರೆದುಕೊಂಡಿತ್ತು. ಈ ವೇಳೆ ಮೋರಿಯೊಳಗೆ ಬಿದ್ದಿದ್ದ ಶೇಖರ್ ಒಳಗೇ ಸಿಲುಕಿಹಾಕಿಕೊಂಡು ಉಸಿರುಗಟ್ಟಿ ಮೃತಪಟ್ಟಿದ್ದ. ಮೋರಿಯಿಂದ ದುರ್ವಾಸನೆ ಬಂದ ಕಾರಣ ಸ್ಥಳೀಯರು ಪರಿಶೀಲಿಸಿದಾಗ ಮೋರಿಯೊಳಗಿರುವು ಸತ್ತಿರುವುದು ಪ್ರಾಣಿ ಅಲ್ಲ, ಮನುಷ್ಯ ಎನ್ನುವುದು ಬೆಳಕಿಗೆ ಬಂದಿತ್ತು. ಮಾಹಿತಿ ನೀಡಿದ ತಕ್ಷಣ ಧಾವಿಸಿ ಮೃತನ ಮಾಹಿತಿ ಪಡೆದ ಪೊಲೀಸರು ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಆತನ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸಂಬಂಧಿತ ಟ್ಯಾಗ್ಗಳು

drainage death ಪರೀಕ್ಷೆ ಮೃತದೇಹ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ