ಆಂಬ್ಯಲೆನ್ಸ್ ಚಾಲಕನ ಮಾನವೀಯತೆ ಉಳಿಸಿತು ನಾಲ್ವರ ಪ್ರಾಣ

An Ambulance driver saved 4 peoples life

06-07-2018

ಚಿಕ್ಕಮಗಳೂರು: ಅಪಘಾತದಿಂದ ರಕ್ತದ ಮಡುವಿನಲ್ಲಿ ನರಳಾಡುತ್ತಿದ್ದವರನ್ನು ಆಂಬ್ಯುಲೆನ್ಸ್ ಚಾಲಕ ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ. ಚಿಕ್ಕಮಗಳೂರಿನ‌ ಉಪ್ಪಳ್ಳಿಯ ಖಾಸಗೀ ಆಂಬ್ಯುಲೆನ್ಸ್ ಚಾಲಕ ಜಿಶಾನ್ ಅಸಾದ್ ತಮ್ಮ ಕೈಲಾದ ಸಹಾಯ ಮಾಡಿ ನಾಲ್ವರ ಪ್ರಾಣ ಉಳಿಸಿದ್ದಾರೆ. ಚಿಕ್ಕಮಗಳೂರಿನಿಂದ ರೋಗಿಯೊಬ್ಬರನ್ನು ಕರೆದೊಯ್ಯುತ್ತಿದ್ದ ವೇಳೆ ಮಾರ್ಗ ಮಧ್ಯೆ ಹಾಸನ ಸಮೀಪದ ಕುಪ್ಪಳ್ಳಿ ಬಳಿ, ಭೀಕರ ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ ನಾಲ್ವರು ತೀವ್ರ ಗಾಯಗಳಿಂದ ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದರು. ಇದನ್ನು ಕಂಡು ಆಂಬ್ಯುಲೆನ್ಸ್ ನಿಲ್ಲಿಸಿ ತನ್ನ ವಾಹನದಲ್ಲೇ ಗಾಯಾಳುಗಳನ್ನು ಹಾಸನ ಜಿಲ್ಲಾಸ್ಪತ್ರಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ. ಖಾಸಗೀ ಆಂಬ್ಯುಲೆನ್ಸ್ ಆದರೂ ಬಿಡಿಗಾಸು ಪಡೆಯಲಿಲ್ಲ ಚಾಲಕ. ಆಂಬ್ಯುಲೆನ್ಸ್ ಚಾಲಕನ ನಿಸ್ವಾರ್ಥ ಸೇವೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

 


ಸಂಬಂಧಿತ ಟ್ಯಾಗ್ಗಳು

Accident Highway ಆಂಬ್ಯುಲೆನ್ಸ್ ನಿಸ್ವಾರ್ಥ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ