ಬಸ್ ಚಾಲಕನ ಮೇಲೆ ಹಲ್ಲೆ: ಪೊಲೀಸರು ಗಪ್ ಚುಪ್!

The bus driver was assaulted at Hubballi

06-07-2018

ಹುಬ್ಬಳ್ಳಿ: ನಗರದ ಗ್ಲಾಸ್‌ ಹೌಸ್ ಬಳಿ ಸಣ್ಣದೊಂದು ಅಪಘಾತವಾಗಿತ್ತು. ಘಟನೆಯಲ್ಲಿ ಖಾಸಗಿ ಬಸ್ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದ್ದು, ಬೈಕ್ ಸವಾರನ ಕಾಲಿಗೆ ಪೆಟ್ಟು ಬಿದ್ದಿದೆ. ಇದನ್ನೇ ದೊಡ್ಡ ತಪ್ಪೆಂದು ಕೆರಳಿದ ಅಲ್ಲೇ ಇದ್ದ ಯುವಕರ ಗುಂಪು, ಬಸ್ ಚಾಲಕನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಆದರೆ, ಇದೆಲ್ಲಾ ನಡೆದಿದ್ದು ಪೊಲೀಸರ ಕಣ್ಣ ಮುಂದೆಯೇ. ಹೀಗಿದ್ದರೂ ಇದನ್ನೆಲ್ಲ ನೋಡಿ ಕಂಡು ಕಾಣದಂತೆ ಪೊಲೀಸರು ತಮ್ಮಪಾಡಿಗೆ ತಾವಿದ್ದರು. ಹಲ್ಲೆ ಮಾಡಿ ಸುಮ್ಮನಾಗದ ಪುಂಡರ ಗುಂಪು ಬಸ್ಸಿನಲ್ಲಿದ್ದ ವಸ್ತುಗಳನ್ನೆಲ್ಲಾ ಜಖಂಗೊಳಿಸಿದ್ದಾರೆ. ಘಟನೆ ನಿನ್ನೆ ತಡರಾತ್ರಿ ನಡೆದಿದೆ. 

ಅಪಘಾತವಾದರೆ ಕಾನೂನು ರೀತಿ ಹೋರಾಟ ಮಾಡಬೇಕು, ಅದು ಬಿಟ್ಟು ಚಾಲಕನ ಮೇಲೆ ಹಲ್ಲೆ ಮಾಡಿದ್ದು ಯಾವ ನ್ಯಾಯ ಎಂದು ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ. ಆದರೆ ಸ್ಥಳದಲ್ಲೇ ಇದ್ದ ಪೊಲೀಸರು ಏಕೆ  ಯಾವುದೇ ಕ್ರಮ ಕೈಗೊಂಡಿಲ್ಲ, ಪರಿಸ್ಥಿತಿ ನಿಯಂತ್ರಿಸಿಲ್ಲ ಎಂಬುದು ಮತ್ತೊಂದು ಪ್ರಶ್ನೆಯಾಗಿದೆ. ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


ಸಂಬಂಧಿತ ಟ್ಯಾಗ್ಗಳು

Bus driver Mobile ಗ್ಲಾಸ್‌ ಹೌಸ್ ಅಪಘಾತ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ