‘ಸೂಪರ್ ಕಾಪ್’ ಕೆಪಿಎಸ್. ಗಿಲ್ ನಿಧನ !

Kannada News

27-05-2017

ನವದೆಹಲಿ: ನಿವೃತ್ತ ಐಪಿಎಸ್ ಅಧಿಕಾರಿ ಕೆಪಿಎಸ್. ಗಿಲ್  (82) ಶುಕ್ರವಾರ ಸಾವನ್ನಪ್ಪಿದ್ದಾರೆ. ಗಿಲ್ ಅವರು ಮೇ 18ರಂದು ತೀವ್ರ ಅನಾರೋಗ್ಯದ ಕಾರಣ ಸರ್ ಗಂಗಾರಾಮ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದರು. ಹೃದಯ ತೊಂದರೆಯು ಕಾಣಿಸಿಕೊಂಡಿದ್ದು, ನಿನ್ನೆ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ. ಪಂಜಾಬ್ ನಲ್ಲಿ ತಲೆದೋರಿದ್ದ  ಖಲಿಸ್ತಾನಿ ಉಗ್ರಗಾಮಿ ಚಟುವಟಿಕೆಯನ್ನು ಹತ್ತಿಕ್ಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇವರು ‘ಸೂಪರ್ ಕಾಪ್’ ಎಂದೇ ಖ್ಯಾತಿ ಪಡೆದಿದ್ದರು. ಪಂಜಾಬ್ ಪೊಲೀಸ್ ಇಲಾಖೆಯ ಮಹಾನಿರ್ದೇಶಕರಾಗಿದ್ದ ಗಿಲ್ ಅವರು  ಅಮೃತಸರದ ಸ್ವರ್ಣದೇವಾಲಯದಲ್ಲಿ ಅಡಗಿದ್ದ ಉಗ್ರರನ್ನು ಹೊರಗೋಡಿಸಲು ನಡೆಸಿದ  ‘ಆಪರೇಷನ್ ಬ್ಲ್ಯಾಕ್ ಥಂಡರ್’  ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು. ಇವರು ಸಾರ್ವಜನಿಕರಿಂದ ‘ಪಂಜಾಬ್ ನ ಸಿಂಹ’ ಎಂದೇ ಹೆಸರು ಗಳಿಸಿದ್ದರು.
 


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ