ಇದು ಕೇವಲ ಹಾಸನದ ಬಜೆಟ್: ಆರ್.ಅಶೋಕ್

R.Ashok Reaction on state budget

05-07-2018

ಬೆಂಗಳೂರು: ರಾಜ್ಯ ಬಜೆಟ್ ಕುರಿತು ‘ಇದು ಕೇವಲ ಹಾಸನದ ಬಜೆಟ್, ರೇವಣ್ಣನವರ ವಾಸ್ತು ಶಾಸ್ತ್ರದ ಪ್ರಕಾರ ಮಂಡಿಸಿದ ಬಜೆಟ್ ಆಗಿದೆ ಎಂದು ಬಿಜೆಪಿ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ. ಇಡೀ ರಾಜ್ಯದ ತೆರಿಗೆ ಹಣ ಹಾಸನದ ಅಭಿವೃದ್ಧಿಗೆ ಹಾಕಿದ್ದಾರೆ. ಉತ್ತರ ಕರ್ನಾಟಕ ಮತ್ತು ಕರಾವಳಿಯನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ವಿದ್ಯುತ್ ಮತ್ತು ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ಮಾಡಿ ಜನ ಸಾಮಾನ್ಯರಿಗೆ ಬರೆ ಹಾಕಲಾಗಿದೆ. ಇದರ ವಿರುದ್ಧ ಬಿಜೆಪಿ ರಾಜ್ಯಾದ್ಯಂತ ಹೋರಾಟ ರೂಪಿಸಲಿದ್ದೇವೆ ಎಂದರು.

ಬಿಜೆಪಿ ವಕ್ತಾರ, ಶಾಸಕ ಸಿ.ಟಿ.ರವಿ, ಪ್ರತಿಕ್ರಿಯಿಸಿ, ಸಮಗ್ರ ಕರ್ನಾಟಕದ ಚಿಂತನೆಯೇ ಇಲ್ಲದ ಕೆಟ್ಟ ಬಜೆಟ್ ಇದಾಗಿದೆ. ಅಭಿವೃದ್ಧಿಗೆ ಪಡೆದ ರೈತರ ಸಾಲಮನ್ನಾ ಮಾಡದೆ ರೈತ ಋಣಮುಕ್ತ ಹೇಗಾಗಲು ಸಾಧ್ಯ. ಚಿಕ್ಕಮಗಳೂರು ಜಿಲ್ಲೆಗೆ ಮೋಸ ಮಾಡಿದ್ದಾರೆ. ಸಮಗ್ರ ಕರ್ನಾಟಕಕ್ಕೆ ತೆರಿಗೆ ಹೊರೆ ಹೊರಿಸಿದ್ದಾರೆ ಎಂದರು.

ಜೆಡಿಎಸ್ ನಾಯಕ ಶಿವಲಿಂಗೇಗೌಡ ಮಾತನಾಡಿ, ಸಿದ್ದರಾಮಯ್ಯ ಮಂಡಿಸಿದ ಬಜೆಟ್‍ನಲ್ಲಿದ್ದ ಎಲ್ಲ ಯೋಜನೆಗಳನ್ನು ಕುಮಾರಸ್ವಾಮಿ ಈ ಬಜೆಟ್ ನಲ್ಲಿ ಮುಂದುವರಿಸಿದ್ದಾರೆ. ಇದೇ ಕಾರಣಕ್ಕೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡಲು ಸಾಧ್ಯವಾಗಿಲ್ಲ. ಬದಲಿಗೆ ಎರಡು ಲಕ್ಷ ರೂ. ವರೆಗಿನ ಎಲ್ಲ ಬಗೆಯ ಸಾಲಮನ್ನಾ ಮಾಡಿದ್ದಾರೆ. ಕರ್ನಾಟಕದ ಇತಿಹಾಸದಲ್ಲಿ ರೈತರಿಗೆ ಇಂತಹಾ ಬಂಪರ್ ಕೊಡುಗೆ ಹಿಂದೆಂದೂ ಕೊಟ್ಟಿರಲಿಲ್ಲ. ಮುಂದಿನ ದಿನಗಳಲ್ಲಿ ರೈತರ ಎಲ್ಲ ಬಗೆಯ ಸಾಲ ಮನ್ನಾ ಮಾಡುವ ನಿರೀಕ್ಷೆ ನಮ್ಮದಾಗಿದೆ ಎಂದು ಹೇಳಿದರು.

 


ಸಂಬಂಧಿತ ಟ್ಯಾಗ್ಗಳು

R.Ashok Budget ಅಭಿವೃದ್ಧಿ ಕರ್ನಾಟಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ