ರಾಜ್ಯದ ಜನತೆಗೆ ಸಿಕ್ಕ ದೋಖಾ ಬಜೆಟ್ ಇದು:ಈಶ್ವರಪ್ಪ

K.S.Eshwarappa reaction on state Budget

05-07-2018

ಬೆಂಗಳೂರು: ‘ಇದು ರಾಜ್ಯದ ಜನತೆಗೆ ಸಿಕ್ಕಿದ ದೋಖಾ ಬಜೆಟ್ ಆಗಿದೆ’ ಎಂದು ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಬಜೆಟ್ ಕುರಿತು ಪ್ರತಿಕ್ರಿಯಿಸಿದ್ದಾರೆ. ರೈತರ ಸಾಲ ಮನ್ನಾ ಆಗುತ್ತದೆ ಎನ್ನುವ ವಿಶ್ವಾಸ ಹುಸಿಯಾಗಿದೆ. ಯುವಜನ ಹಾಗೂ ಕ್ರೀಡಾ ಲೋಕಕ್ಕೆ ಮೋಸ ನಡೆದಿದೆ. ಅಲ್ಪಸಂಖ್ಯಾತರಿಗೆ ಬಜೆಟ್ ನಲ್ಲಿ ಮೋಸ ಮಾಡಲಾಗಿದೆ. ಯುವಜನ, ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಮಂಡ್ಯ, ರಾಮನಗರ ಹಾಗೂ ಹಾಸನಕ್ಕೆ ಬಜೆಟ್‍ನಲ್ಲಿ ಪ್ರಾಮುಖ್ಯತೆ ನೀಡಲಾಗಿದೆ ಎಂದರು.

ಕುಮಾರಸ್ವಾಮಿ ಅವರು ಮಂಡ್ಯ ಹಾಗೂ ಹಾಸನದ ಮುಖ್ಯಮಂತ್ರಿ ಅಲ್ಲ. ಅವರು ಇಡೀ ರಾಜ್ಯದ ಮುಖ್ಯಮಂತ್ರಿ. ಬಜೆಟ್‍ನಲ್ಲಿ ಸಮಗ್ರ ರಾಜ್ಯವನ್ನ ಪರಿಗಣಿಸಿಲ್ಲ. ರಾಜ್ಯದ ಜನತೆಯ ನಿರೀಕ್ಷೆಯನ್ನು ಬಜೆಟ್ ಹುಸಿಗೊಳಿಸಿದೆ ಎಂದರು.


ಸಂಬಂಧಿತ ಟ್ಯಾಗ್ಗಳು

K.S.Eshwarappa Budget ನಿರೀಕ್ಷೆ ಮೋಸ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ