3 ಜಿಲ್ಲೆಗಳಿಗೆ ಅನುಕೂಲ ಮಾಡಿಕೊಡಲು ಬಜೆಟ್ ಬೇಕಿರಲಿಲ್ಲ: ಶೆಟ್ಟರ್

BJP leader Jagadish Shettar reaction on Budget

05-07-2018

ಬೆಂಗಳೂರು: ಸಮ್ಮಿಶ್ರ ಸರ್ಕಾರದ ಬಜೆಟ್ ಕುರಿತು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಪ್ರತಿಕ್ರಿಯಿಸಿ, ಹಾಸನ,ಮಂಡ್ಯ ಮತ್ತು ರಾಮನಗರಕ್ಕೆ ಮಾತ್ರ ಅನುಕೂಲ ಮಾಡಲು ಈ ಬಜೆಟ್ ಮಂಡನೆ ಬೇಕಿರಲಿಲ್ಲ. ಅದಕ್ಕೆ ಪೂರಕ ಬಜೆಟ್ ಮಂಡನೆ ಸಾಕಾಗಿತ್ತು. ರೈತರ ರಾಷ್ಟ್ರೀಕೃತ ಬ್ಯಾಂಕ್ ಸಾಲ ಮನ್ನಾ ಬಗ್ಗೆ ಉಲ್ಲೇಖವಿಲ್ಲ. ಕೇವಲ 4800 ಕೋಟಿ ರೂ. ಸಾಲ ಮನ್ನಾ ಮಾಡಲಾಗಿದೆ. ಸಾಲ ಮನ್ನಾ ವಿಷಯದಲ್ಲೂ ಗೊಂದಲ ಮೂಡಿಸಿದ್ದಾರೆ. ನೀರಾವರಿ ಯೋಜನೆಗಳಿಗೆ ಕೇವಲ ಶೇ.8ರಷ್ಡು ಕಡಿಮೆ ಅನುದಾನ ನೀಡಲಾಗಿದೆ. ಎಲ್ಲ ಇಲಾಖೆಗಳಿಗೆ ಅನುದಾನ ಪ್ರಮಾಣ ಕಡಿತ ಮಾಡಲಾಗಿದೆ. ಹಿರಿಯ ನಾಗರೀಕರಿಗೆ 6000 ರೂ. ಪಿಂಚಣಿ ಭರವಸೆ ನೀಡಿ ಕೇವಲ 1000 ರೂ. ಹೆಚ್ಚಿಸಿ ಅನ್ಯಾಯ ಮಾಡಲಾಗಿದೆ ಎಂದರು.

 


ಸಂಬಂಧಿತ ಟ್ಯಾಗ್ಗಳು

jagadish shettar Budget ಪಿಂಚಣಿ ನಾಗರೀಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ