ಇದು ಅಣ್ಣತಮ್ಮಂದಿರ ಬಜೆಟ್ ಎಂದ ಬಿ.ಎಸ್.ಯಡಿಯೂರಪ್ಪ

B.S.yeddyurappa reaction on state budget

05-07-2018

ಬೆಂಗಳೂರು: ಜೆಡಿಎಸ್–ಕಾಂಗ್ರೆಸ್ ಮೈತ್ರಿ ಸರ್ಕಾರದ ಚೊಚ್ಚಲ ಬಜೆಟ್ ಅನ್ನು ಪ್ರತಿಪಕ್ಷ ಬಿಜೆಪಿ ಸದಸ್ಯರು ವ್ಯಂಗ್ಯವಾಗಿ ಟೀಕಿಸಿದ್ದು, ಇದು ಹಾಸನ, ರಾಮನಗರದ ಬಜೆಟ್ ಎಂದು ವ್ಯಂಗ್ಯವಾಡಿದ್ದಾರೆ. ಜೆಡಿಎಸ್ ಸದಸ್ಯರು ಬಜೆಟ್‍ನ್ನು ಸ್ವಾಗತಿಸಿದ್ದಾರೆ.

ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಾತಿಗೆ ತಪ್ಪಿ ರೈತರಿಗೆ ಮೋಸ ಮಾಡುತ್ತಿದ್ದಾರೆ. ರೈತರ ಕೇವಲ ಆರು ಸಾವಿರ ಕೋಟಿ ರೂ.ಮಾತ್ರ ಮನ್ನಾ ಮಾಡುತ್ತಿದ್ದಾರೆ. ಆರೂವರೆ ಕೋಟಿ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಸರಿಯಲ್ಲ ಎಂದರು.

ಸಾಲ ಮನ್ನಾ ಮಾಡುವ ಉದ್ದೇಶದಿಂದ 34000 ಕೋಟಿ ರೂ. ಹಣವನ್ನು ಹೇಗೆ ಹೊಂದಿಸಿಕೊಳ್ಳುತ್ತಾರೆ ಎನ್ನುವ ಬಗ್ಗೆ ಉಲ್ಲೇಖವಿಲ್ಲ. ಆದರೆ ಪೆಟ್ರೋಲ್ ಡೀಸೆಲ್ ದರ ಶೇ.9ರಷ್ಟು ಏರಿಕೆ ಮಾಡಿ ಜನಸಾಮಾನ್ಯರಿಗೆ ಬರೆ ಹಾಕುತ್ತಿದ್ದಾರೆ. ಹಾಸನ ಮತ್ತು ರಾಮನಗರ ಎರಡು ಜಿಲ್ಲೆಗಳಿಗೆ ಬಜೆಟ್‍ನಲ್ಲಿ ಆದ್ಯತೆ ನೀಡಿದ್ದಾರೆ. ಇದು ಅಣ್ಣತಮ್ಮಂದಿರ ಬಜೆಟ್. ರಾಜ್ಯದ ಉಳಿದೆಲ್ಲ ಜಿಲ್ಲೆಗಳಿಗೆ ಅನ್ಯಾಯ ಮಾಡಿದ್ದಾರೆ ಎಂದರು. 

ಜುಲೈ 12ರ ನಂತರ ನಮ್ಮ ಹೋರಾಟ ಆರಂಭವಾಗಲಿದೆ. ರೈತ ಸಮುದಾಯ ಈ ಬಜೆಟ್ ನೋಡಿ ಮೋಸ ಹೋಗಬಾರದು. ರೈತರನ್ನು ಬೀದಿಗೆ ತರುವ ಬಜೆಟ್ ಇದಾಗಿದೆ. ಗರ್ಭಿಣಿ ಸ್ತ್ರೀಯರಿಗೆ, ವೃದ್ದರಿಗೆ, ನೇಕಾರರಿಗೆ, ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳಿಗೆ ಕೊಟ್ಟ ಮಾತು ಉಳಿಸಿಕೊಂಡಿಲ್ಲ ಎಂದು ಯಡಿಯೂರಪ್ಪ ಟೀಕಿಸಿದರು.


ಸಂಬಂಧಿತ ಟ್ಯಾಗ್ಗಳು

yeddyurappa Budget ಸ್ತ್ರೀಶಕ್ತಿ ನೇಕಾರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ