ನೀರಿನಲ್ಲಿ ಮುಳುಗಿ ಯುವಕನ ಸಾವು !

Kannada News

27-05-2017 170

ಮಂಡ್ಯ:- ಬರ್ಥಡೇ ಪಾರ್ಟಿಗೆ ಬಂದಿದ್ದ ಯುವಕ ನೀರು ಪಾಲಾಗಿರುವ ಘಟನೆ, ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಮುತ್ತತ್ತಿ ಬಳಿ ನಡೆದಿದೆ. ಮಹೇಶ್ (೨೦) ಮೃತ ಯುವಕ. ಈತ ರಾಮನಗರ ಜಿಲ್ಲೆ ಕನಕಪುರ ಮೂಲದವನೆಂದು ತಿಳಿದು ಬಂದಿದೆ. ಆರು ಬೈಕ್ ನಲ್ಲಿ ೧೨ ಜನ ಸ್ನೇಹಿತರು ಹುಟ್ಟು ಹಬ್ಬ ಆಚರಣೆಗೆ ಮುತ್ತತ್ತಿಗೆ ಬಂದಿದ್ದರು, ಹುಟ್ಟು ಹಬ್ಬ ಆಚರಣೆಯ ನಂತರ ನದಿಯಲ್ಲಿ ಈಜಲು ಇಳಿದಿದ್ದರು, ಈ ಸಂದರ್ಭದಲ್ಲಿ  ಯುವಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಮೃತ ಯುವಕನು ಬೆಂಗಳೂರಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದು, ಮೃತ ಯುವಕನ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಂಡಿದ್ದಾರೆ.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ