‘ಎಫ್ಕೆಸಿಸಿಐ ಬಜೆಟ್ ಅನ್ನು ಸ್ವಾಗತಿಸುತ್ತಿದೆ’ ಎಂದ ಅಧ್ಯಕ್ಷರು

FKCCI reaction on Karnataka state budget

05-07-2018

ಬೆಂಗಳೂರು: ದೋಸ್ತಿ ಸರ್ಕಾರದ ಬಜೆಟ್ ಮಂಡನೆಯಾಗಿದ್ದು, ಈ ಕುರಿತು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಮುಖ್ಯಸ್ಥರು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ್ದಾರೆ. ಸಂಸ್ಥೆಯ ಅಧ್ಯಕ್ಷ ಸುಧಾಕರ್.ಸಿ.ಶೆಟ್ಟಿ ಮಾತನಾನಾಡಿ, ಬಹು ನಿರೀಕ್ಷಿತ ಬಜೆಟ್ ಗೆ ತೆರೆ ಬಿದ್ದಿದೆ. ರೈತರಿಗೆ ಉಪಯುಕ್ತವಾದ ಬಜೆಟ್ ಇದಾಗಿದೆ. ಇದನ್ನು ಎಫ್.ಕೆ.ಸಿ.ಸಿ.ಐ ಸ್ವಾಗತಿಸುತ್ತಿದೆ ಎಂದು ಹೇಳಿದ್ದಾರೆ. ಇಂಡಸ್ಟ್ರಿಯಲ್ ಅಥಾರಿಟಿಗಳ ಬಗ್ಗೆ ಗಮನ ಹರಿಸಲಾಗಿದೆ, ಚೀನಾ ಕಾರ್ಪೋರೆಟ್ ಕಂಪನಿಗಳಿಗೆ ಪೈಪೋಟಿ ನೀಡುವ ಯೋಜನೆಗಳು ಕರ್ನಾಟಕಕ್ಕೆ ಸಹಾಯಕವಾಗಲಿದೆ ಎಂದಿದ್ದಾರೆ.

ಸ್ಯಾಟಲೈಟ್ ಟೌನ್ ಶಿಪ್ ಆಗಿಲ್ಲ, ಬೆಂಗಳೂರನ್ನ ಟ್ರಾಫಿಕ್ ಫ್ರೀ ಮಾಡೋಕೆ ಇದು ಪೂರಕವಾಗುತ್ತಿತ್ತು, ಬೆಂಗಳೂರಿಗೆ ಕೊಟ್ಟಿರುವ ಕೊಡುಗೆಗಳ ಬಗ್ಗೆ ಸಂತೋಷವೆನಿಸುತ್ತದೆ. ಮೆಟ್ರೋ, ಬಿಎಂಟಿಸಿ, ಸಿಗ್ನಲ್ ಕಾರಿಡರ್, ಬೆಳ್ಳಂದೂರು ಕೆರೆ ಅಭಿವೃದ್ಧಿಗೆ ಅನುದಾನ, ಬ್ರಾಹ್ಮಣ ಸಮಾಜಕ್ಕೆ 25ಕೋಟಿ ಅನುದಾನ ನೀಡಲಾಗಿದೆ. ರಾಜ್ಯದ 7 ಜಿಲ್ಲೆಗಳಲ್ಲಿ ಇಂಡಸ್ಟ್ರಿಯಲ್ ಟ್ರೈನಿಂಗ್ ಸೆಂಟರ್ ಗಳ ರಚನೆ ಸೇರಿದಂತೆ, ಬೆಂಗಳೂರಿನ ಎಂ.ಎನ್.ಸಿ ಕಂಪನಿಗಳಲ್ಲಿ ಟ್ರೈನಿಂಗ್ ಸೆಂಟರ್ಗಳನ್ನು ಸ್ಥಾಪಿಸಬೇಕಿತ್ತು ಎಂದು ಅಭಿಪ್ರಾಯಪಟ್ಟರು.

ಪೆಟ್ರೋಲ್, ಡಿಸೇಲ್ ಸೆಸ್ ಹೆಚ್ಚಳ ಜನ ಸಮಾನ್ಯರ ಮೇಲೆ ಹೊರೆಯಾಗಲಿದೆ, ರಾಜ್ಯದ ನಾಲ್ಕು ಕಡೆಗಳಲ್ಲಿ ಟ್ರೇಡ್ ಲೈಸೆನ್ಸ್ ಬಗ್ಗೆ ಹೇಳಿದ್ದೆವು. ಆದರೆ, ಟ್ರೆಡ್ ಲೈಸೆನ್ಸ್ ರದ್ದು ಬಗ್ಗೆ ಯಾವುದೇ ವಿಷಯ ಪ್ರಸ್ತಾಪವಾಗಿಲ್ಲ. ಆರ್.ಟಿ.ಇ ರದ್ದು ಮಾಡಬೇಕು. ದೇಶದ 14ರಾಜ್ಯಗಳಲ್ಲಿ ಆರ್.ಟಿ.ಇ ಇಲ್ಲ. ಕೆಲವರು ಮಾತ್ರ ಅದರ ಉಪಯೋಗ ಪಡೆಯುತ್ತಿದ್ದಾರೆ, ಇದರ ಬದಲಾಗಿ ಸರ್ಕಾರಿ ಶಾಲೆಗಳ ಅಡಿಯಲ್ಲಿ ಪ್ರತ್ಯೇಕ ಸೌಲಭ್ಯ ಕಲ್ಪಿಸಬೇಕು ಎಂದು ಅಭಿಪ್ರಾಯ ಪಟ್ಟರು.

ಕುಮಾರಸ್ವಾಮಿಯ ಬಜೆಟ್ ಅನುಭವಿ ಬಜೆಟ್ನಂತಿದೆ, ನೀರಿಕ್ಷೆಗೂ ಮೀರಿ ಬೆಂಗಳೂರು ಅಭಿವೃದ್ಧಿ, ರೈತರ ಅಭಿವೃದ್ಧಿಗೆ ಪೂರಕವಾಗಿದೆ. ಬೆಂಗಳೂರಿಗೆ ಅತಿ ಅವಶ್ಯಕ ಯೋಜನೆಗಳನ್ನ ನೀಡಿದ್ದಾರೆ. ಆದರೆ, ಅದು ಬೇಗ ಕಾರ್ಯರೂಪಕ್ಕೆ ಬರಬೇಕು. ಮೆಟ್ರೋ ಮೂರನೇ ಹಂತ, ತ್ಯಾಜ್ಯ ನಿರ್ವಹಣೆಗೆ ಒತ್ತು ನೀಡಲಾಗಿದೆ. ಬಿಎಂಟಿಸಿಯ ಹೆಚ್ಚುವರಿ ಬಸ್ ಗಳ ಬಗ್ಗೆ ಒತ್ತು ನೀಡಿದ್ದಾರೆ. ಸರ್ವವರ್ಗಗಳಿಗೆ ಬೇಕಾದ ಬಜೆಟ್ ಇದಾಗಿದೆ ಎಂದು ಹೇಳಿದರು.


ಸಂಬಂಧಿತ ಟ್ಯಾಗ್ಗಳು

FKCCI Budget ಅಭಿಪ್ರಾಯ ಇಂಡಸ್ಟ್ರಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ