ಸಾಲಮನ್ನಾದಲ್ಲಿ ಅನುಮಾನ ಮೂಡುತ್ತಿದೆ: ಕುರುಬೂರು ಶಾಂತಕುಮಾರ್

Farmers leader kuruburu shanthakumar reaction on Budget

05-07-2018

ಬೆಂಗಳೂರು: ‘ಈ ಬಜೆಟ್ ತಂತ್ರಗಾರಿಕೆಯಲ್ಲಿ ಕುತಂತ್ರದ ಒಂದು ವ್ಯವಸ್ಥೆ. ಇದು ರೈತರ ಮೂಗಿಗೆ ತುಪ್ಪ ಹಚ್ಚುವಂತ ಕೆಲಸ’ ಎಂದು ದೋಸ್ತಿ ಸರ್ಕಾರದ ಚೊಚ್ಚಲ ಬಜೆಟ್‌ ನಲ್ಲಿ ರೈತರ ಸಾಲಮನ್ನಾ ವಿಚಾರವಾಗಿ ಪ್ರತಿಕ್ರಿಯಿಸಿದ ರೈತ ಮುಖಂಡ ಕುರುಬೂರು ಶಾಂತಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಜೆಟ್ ನಂತರ ರೈತರ ಸಾಲಮನ್ನಾ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಸಾಲಮನ್ನಾದಲ್ಲಿ ಅನುಮಾನ ಮೂಡುತ್ತಿದೆ. ಸಾಲಮನ್ನಾ ಮಾಡುವುದಾಗಿ ಹೇಳಿ ಸುಸ್ತಿ ಸಾಲಮನ್ನಾ ಮಾಡಿದ್ದೀರಾ.? ನಮಗೆ ಸುಸ್ತಿ ಸಾಲಮನ್ನಾ ಬೇಡ, ನಮಗೆ ಬೆಳೆ ಸಾಲ ಮನ್ನಾ ಬೇಕು. ಈ ರೀತಿಯ ನಡುವಳಿಕೆ ಒಳ್ಳೆಯದಲ್ಲ ಎಂದು ಹೇಳಿದರು.

ನಿಮ್ಮ ಮೇಲೆ ರಾಜ್ಯದ ರೈತರು ಬಹಳಷ್ಟು ನಂಬಿಕೆ ಇಟ್ಟಿದ್ದಾರೆ. ಆದರೆ, ನೀವು ಆ ನಂಬಿಕೆಗೆ ಮೋಸ ಮಾಡುವ ಕೆಲಸ ಮಾಡಿದ್ದೀರಿ. ನಮ್ಮನ್ನು ಕರೆದು ಸಭೆ ಮಾಡುವಾಗ ಮೊದಲು ಆಶ್ವಾಸನೆ ಕೊಟ್ಟಿದ್ದೀರಿ, ಒಂದು ತಿಂಗಳು ಸಮಯಾವಕಾಶ ಕೇಳಿ ಇದೀಗ ಕುತಂತ್ರ ಮಾಡಿದ್ದೀರಾ.? ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಸಾಲಮನ್ನಾ ವಿಚಾರವೇ ಪ್ರಸ್ತಾಪವಿಲ್ಲ. ನಮಗೆ ಬೆಳೆ ಸಾಲಮನ್ನಾ ಆಗಬೇಕು.? ಸುಸ್ತಿ ಸಾಲಮನ್ನಾ ಬೇಡ. ನೀವು ಮಾಡಿರುವ ಘೋಷಣೆ ಅನುಮಾನ ಮೂಡಿಸಿದೆ ಎಂದಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Mortgage loan Farmers ಕುತಂತ್ರ ಸುಸ್ತಿ ಸಾಲ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ