ಎಲ್ಲಾ ನಗರಗಳಲ್ಲೂ ಲಕ್ಷ ಮನೆ ನಿರ್ಮಾಣ ಯೋಜನೆ

Lakhs home construction project in all cities

05-07-2018

ಬೆಂಗಳೂರು: ಹಿಂದಿನ ಸರ್ಕಾರದ ಎಲ್ಲಾ ವಸತಿ ಯೋಜನೆಗಳನ್ನು ಮುಂದುವರೆಸುವುದರ ಜೊತೆಗೆ ಬೆಂಗಳೂರಿನಲ್ಲಿ ಜಾರಿಗೆ ತಂದಿರುವ ಲಕ್ಷ ಮನೆ ನಿರ್ಮಾಣ ಯೋಜ‌ನೆಯನ್ನು ಎಲ್ಲಾ ನಗರಕ್ಕೆ ವಿಸ್ತರಣೆ ಮಾಡುವುದಾಗಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ತಮ್ಮ‌ ಚೊಚ್ಚಲ ಬಜೆಟ್ ನಲ್ಲಿ ಘೋಷಿಸಿದ್ದಾರೆ.

ವಸತಿ ಯೋಜನೆಗೆ ಆಧ್ಯತೆ ನೀಡುವ ಭರವಸೆವನ್ನು ಬಜೆಟ್ ನಲ್ಲಿ ನೀಡಿರುವ ಸಿಎಂ, ಬೆಂಗಳೂರಿನಲ್ಲಿ ಬಡವರಿಗೆ ಆಯ್ದ ಸ್ಥಳದಲ್ಲಿ ಬಹುಮಹಡಿ ಮನೆಗಳ ನಿರ್ಮಾಣ ಮಾಡಲಾಗುತ್ತದೆ. ಹಿಂದಿನ ಸರ್ಕಾರದ ವಸತಿ ಯೋಜನೆಗಳನ್ನೆಲ್ಲಾ ಮುಂದುವರಿಕೆ ಮಾಡಲಾಗುತ್ತದೆ. ಬೇಡಿಕೆಗೆ ತಕ್ಕಂತೆ ಮನೆಗಳ ನಿರ್ಮಾಣ ಮಾಡಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.

ವಸತಿ ಯೋಜನೆಗಳಲ್ಲಿ ವಿಕಲಚೇತನರಿಗೆ ಶೇ.3ರಷ್ಟು ಮೀಸಲಾತಿ ಇದ್ದು ವಿಕಲಚೇತನ ಫಲಾನುಭವಿಗಳ ಬೇಡಿಕೆಯ ಮೇರೆಗೆ ಆನ್ ಲೈನ್ ನಲ್ಲಿ ಅರ್ಜಿ ಪಡೆದು ಮನೆ ಹಂಚಿಕೆ ವ್ಯವಸ್ಥೆಗೆ ಕ್ರಮ ಕೈಗೊಳ್ಳುವ ಭರವಸೆಯನ್ನು ಸಿಎಂ ಬಜೆಟ್ ನಲ್ಲಿ ನೀಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

H.D.Kumaraswamy Housing Scheme ಬಜೆಟ್ ವಿಕಲಚೇತನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ