ಕೆಎಸ್ಒಯುಗೆ ಸಿಗಲಿದೆಯಾ ಯುಜಿಸಿಯಿಂದ ಮಾನ್ಯತೆ?

KSOU and UGC

05-07-2018

ಬೆಂಗಳೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮಾನ್ಯತೆ ವಿಚಾರವಾಗಿ ಕೆ.ಎಸ್.ಒ.ಯುಗೆ ಇದೇ ವಾರದಲ್ಲಿ ಯುಜಿಸಿಯಿಂದ ಮಾನ್ಯತೆ ಸಿಗುವ ಸಾಧ್ಯತೆಗಳಿಗೆ ಎಂದು ಹೇಳಲಾಗುತ್ತಿದೆ. ಹಾಗೇನಾದರೂ ಆದರೆ, ಕಳೆದ ಐದು ವರ್ಷಗಳಿಂದ ಉಂಟಾಗಿರುವ ಅನಿಶ್ಚಿತತೆ ಈ ವಾರದಲ್ಲಿ ಕೊನೆಗೊಳ್ಳಲಿದೆ. 32 ಕೋರ್ಸುಗಳಿಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿರುವ ಕೆ.ಎಸ್.ಒ.ಯು ಅಗತ್ಯ ದಾಖಲೆಗಳನ್ನು ಮುಕ್ತ ವಿ.ವಿ.ಆಡಳಿತ ವರ್ಗ ಈಗಾಗಲೇ ಸಲ್ಲಿಸಿದೆ. ಈ ಕುರಿತು ನವದೆಹಲಿಯಲ್ಲಿ ಮುಕ್ತ ವಿ.ವಿ ಹಾಗೂ ಯುಜಿಸಿ ಅಧಿಕಾರಿಗಳ ನಡುವೆ ಮಾತುಕತೆ ನಡೆದಿದ್ದು, ಕೆಲ ನಿಬಂಧನೆಗಳೊಂದಿಗೆ ಮುಕ್ತ ವಿ.ವಿ ಮಾನ್ಯತೆ ನವೀಕರಣಗೊಳ್ಳುವ ಸಾಧ್ಯತೆಗಳಿವೆ ಎಂದು ಕೆ.ಎಸ್.ಒ.ಯುನ ಮೂಲಗಳಿಂದ ಮಾಹಿತಿ ಸಿಕ್ಕಿದೆ.


ಸಂಬಂಧಿತ ಟ್ಯಾಗ್ಗಳು

KSOU UGC ನವೀಕರಣ ಮಾನ್ಯತೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ