ದೇಶವನ್ನು ಬಹಳ ಪ್ರೀತಿಸುತ್ತಿದ್ದ ಅವರ ಹಾದಿಯಲ್ಲೇ ನಾವೆಲ್ಲರೂ ನಡೆಯಬೇಕಿದೆ !

Kannada News

27-05-2017

ಬೆಂಗಳೂರು:- ಮಾಜಿ ಪ್ರಧಾನ ಮಂತ್ರಿ ದಿವಂಗತ ಜವಾಹರ್ ಲಾಲ್ ನೆಹರು ಅವರ 53 ಪುಣ್ಯ ತಿಥಿ ಅಂಗವಾಗಿ ವಿಧಾನ ಸೌಧದ ಪಶ್ಚಿಮ. ದಿಕ್ಕಿನಲ್ಲಿರುವ ನೆಹರು ಅವರ ಭಾವ ಚಿತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ನೆಹರು ಅವರು ದೇಶದ ಅಭಿವೃದ್ಧಿಗೆ  ಅಡಿಪಾಯ ಹಾಕಿದವರು, ಮಕ್ಕಳನ್ನು  ಹಾಗೂ ಈ ದೇಶವನ್ನು ಬಹಳ ಪ್ರೀತಿಸುತ್ತಿದ್ದರು. ಅವರ ಹಾದಿಯಲ್ಲೇ ನಾವೆಲ್ಲರೂ ಇಂದು ನಡೆಯಬೇಕಿದೆ.  ಕೇಂದ್ರ ಸರ್ಕಾರದ ಗೋಹತ್ಯೆ ನಿಷೇಧ ಕಾಯ್ದೆಗೆ ಸಂಬಂಧಿಸಿದಂತೆ ಈವರೆಗೆ ಅಧಿಕೃತ ಆದೇಶದ ಪ್ರತಿ ಇನ್ನೂ ಕೈ ಸೇರಿಲ್ಲ. ಆದೇಶದ ಪ್ರತಿ ಬಂದ ಬಳಿಕ ಪರಿಶೀಲನೆ ನಡೆಸೋದಾಗಿ, ಮುಖ್ಯಮಂತ್ರಿಯವರು ಪ್ರತಿಕ್ರಿಯಿಸಿದರು. ಬೆಂಗಳೂರು  ನಗರಾಭೀವೃದ್ದಿ ಸಚಿವ ಕೆ ಜೆ ಜಾರ್ಜ್,  ಶಾಸಕ ಅಶೋಕ ಪಟ್ಟಣ ಶೆಟ್ಟಿ ಸೇರಿದಂತೆ ಅಧಿಕಾರಿಗಳು ಹಾಜರಿದ್ದರು.                       


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ