ವ್ಯಕ್ತಿಯೊಬ್ಬರ ಮೇಲೆ ಶಾಸಕನ ಬೆಂಬಲಿಗರಿಂದ ಹಲ್ಲೆ!

MLA Followers assault on a man: 5 people arrested

05-07-2018

ಬೆಂಗಳೂರು: ಶ್ರೀರಂಗಪಟ್ಟಣದ ಶಾಸಕ ರವೀಂದ್ರ ಶ್ರೀಕಂಠಯ್ಯ ಬೆಂಬಲಿಗರಿಂದ ಹಲ್ಲೆ ಪ್ರಕರಣ ವರದಿಯಾಗಿದೆ. ಘಟನೆ ಸಂಬಂಧ ಅರೆಕೆರೆ ಪೊಲೀಸರು ಹಲ್ಲೆ ನಡೆಸಿದ ಐವರು ಜೆಡಿಎಸ್ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಜುಲೈ 3ರಂದು ಟಿ.ಎಂ.ಹೊಸೂರಿನ ರಘು ಎಂಬುವರ ಕಲ್ಲು-ಕ್ವಾರೆ ಕಚೇರಿಗೆ ನುಗ್ಗಿ ಆರೋಪಿಗಳು ಹಲ್ಲೆ ನಡೆಸಿದ್ದರು.

ಈ ಘಟನೆಗೆ ರಾಜಕೀಯ ಕಾರಣವು ಕೂಡ ಇದೆ ಎಂದು ಹೇಳಲಾಗುತ್ತಿದೆ. ಚುನಾವಣೆಯಲ್ಲಿ ಜೆಡಿಎಸ್ ಪರವಾಗಿ ಕ್ವಾರೆ ಮಾಲೀಕ ರಘು ಕೆಲಸ ಮಾಡದಿದ್ದಕ್ಕೆ ಶಾಸಕ ರವೀಂದ್ರ ಶ್ರೀಕಂಠಯ್ಯ ಬೆಂಬಲಿಗರಿಂದ ಹಲ್ಲೆ ನಡೆದಿದೆ ಎನ್ನಲಾಗಿದೆ. ಟಿ.ಎಂ.ಹೊಸೂರು ಗ್ರಾಮದ ಸಿದ್ದೇಗೌಡ, ಸುದರ್ಶನ್, ಪ್ರಕಾಶ್, ಯೋಗೇಶ್, ರವೀಶ್ ಬಂಧಿತ ಆರೋಪಿಗಳು. ರವೀಂದ್ರ ಶ್ರೀಕಂಠಯ್ಯ ಬೆಂಬಲಿಗರು ದಾಂಧಲೆ ನಡೆಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಸಂಬಂಧಿತ ಟ್ಯಾಗ್ಗಳು

Ravindra Srikantaiah MLA ರಾಜಕೀಯ ದೃಶ್ಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ