ಪಬ್ ಮೇಲೆ ಪೊಲೀಸರ ದಾಳಿ: 32 ಯುವತಿಯರ ರಕ್ಷಣೆ

Police Raid on a Pub: 32 girls protected

04-07-2018

ಬೆಂಗಳೂರು: ಜೀವನ್ ಭೀಮಾ ನಗರ ಪಬ್ ವೊಂದರಲ್ಲಿ ಯುವತಿಯರಿಂದ ಅಶ್ಲೀಲ ನೃತ್ಯ ಮಾಡಿಸುತ್ತಿದ್ದ ಮಾಹಿತಿ ಆಧರಿಸಿ ದಾಳಿ ನಡೆಸಿರುವ ಪೊಲೀಸರು 32 ಮಂದಿ ಯುವತಿಯರನ್ನು ರಕ್ಷಿಸಿ 6 ಮಂದಿಯನ್ನು ಬಂಧಿಸಿದ್ದಾರೆ.

ಯುವತಿಯರಿಂದ ಅಶ್ಲೀಲವಾಗಿ ನೃತ್ಯ ಮಾಡಿಸುತ್ತ ಮದ್ಯ ಸರಬರಾಜು ಮಾಡುತ್ತಿದ್ದ, ಜೀವನ ಭೀಮಾನಗರದ ಮ್ಯಾಂಗೊ ಟ್ರಿ ಪಬ್ ಮೇಲೆ ದಾಳಿ ನಡೆಸಿದ ಪೊಲೀಸರು ಪಬ್‍ನ ಮ್ಯಾನೇಜರ್ ಸೇರಿ 6 ಮಂದಿಯನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.

ಲೈವ್‍ ಬ್ಯಾಂಡ್ ನಡೆಸಲು ಕಠಿಣ ಮಾರ್ಗಸೂಚಿಗಳನ್ನು ಜಾರಿಗೊಳಿಸುವ ಹಿನ್ನೆಲೆಯಲ್ಲಿ ಆರೋಪಿಗಳು ಪಬ್‍ನಲ್ಲಿ ರಹಸ್ಯವಾಗಿ ಯುವತಿಯರಿಂದ ನೃತ್ಯ ಮಾಡಿಸಿ ಹಣ ಸುಲಿಗೆ ಮಾಡಲಾಗುತ್ತಿತ್ತು. ಖಚಿತ ಮಾಹಿತಿಯಾಧರಿಸಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Live band PUB ಆರೋಪಿ ಹಣ ಸುಲಿಗೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಪೊಲೀಸರ ಪ್ರತಿಕ್ರಿಯೆಗೆ ಧನ್ಯವಾದಗಳು,
  • ನರಸಿಂಹ
  • ವಿದ್ಯಾರ್ಥಿ