ಬಾಂಬ್ ಸ್ಫೋಟ ಪ್ರಕರಣ: ತಪ್ಪೊಪ್ಪಿಕೊಂಡ ಆರೋಪಿಗಳು

Bomb blast: NIA submitted report to court

04-07-2018

ಬೆಂಗಳೂರು: ಕಳೆದ 2010ರ ಎಪ್ರಿಲ್‍ನಲ್ಲಿ ನಡೆದ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಬಾಂಬ್ ಸ್ಫೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳು ತಪ್ಪೊಪ್ಪಿಗೆ ಪ್ರಮಾಣಪತ್ರವನ್ನು ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಬಾಂಬ್ ಸ್ಫೋಟದ ಪ್ರಕರಣ ಆರೋಪಿಗಳಾದ ಗೋಹರ್ ಅಜಿಜ್ ಕೋಮನಿ, ಕಮಲ್‍ ಹಸನ್ ಹಾಗೂ ಮೊಹಮದ್ ಖಪೀನ್ ತಪ್ಪೊಪ್ಪಿಗೆ ಪ್ರಮಾಣಪತ್ರವನ್ನು ರಾಷ್ಟ್ರೀಯ ಭದ್ರತಾ ದಳ(ಎನ್‍ಐಎ) ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಬಾಂಬ್ ಸ್ಫೋಟದ ಪ್ರಕರಣದಲ್ಲಿ ತಮ್ಮ ಪಾತ್ರವಿದೆ ಎಂದು ಆರೋಪಿಗಳು ಪ್ರಮಾಣಪತ್ರದಲ್ಲಿ ಸಲ್ಲಿಸಿದ್ದಾರೆ. ಕಳೆದ 2010ರ ಏಪ್ರಿಲ್ 17ರಂದು ನಡೆದ ಬಾಂಬ್ ಸ್ಫೋಟದ ಪ್ರಕರಣದಲ್ಲಿ 8 ಮಂದಿ ಗಂಭೀರ ಗಾಯಗೊಂಡಿದ್ದರು. ಪ್ರಕರಣವನ್ನು ಎನ್‍ಐಎ ತನಿಖೆ ಕೈಗೊಂಡಿತ್ತು.

 

 


ಸಂಬಂಧಿತ ಟ್ಯಾಗ್ಗಳು

Bomb NIA ನ್ಯಾಯಾಲಯ ಕ್ರೀಡಾಂಗಣ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ