ಟೀಕೆ ಮಾಡುವವರಿಗೆ ಸವಾಲೆಸೆದ ಸಿಎಂ ಕುಮಾರಸ್ವಾಮಿ

Cm kumaraswamy challenged the one who criticize about tax

04-07-2018

ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಕುಟುಂಬ ಅಪಾರ ಪ್ರಮಾಣದಲ್ಲಿ ಆಸ್ತಿ ಸಂಗ್ರಹಿಸಿದೆ. ಸೂಕ್ತ ತೆರಿಗೆ ಪಾವತಿಸುತ್ತಿಲ್ಲ ಎಂದು ಟೀಕೆ ಮಾಡುವವರು ಮೊದಲು ದಾಖಲೆಗಳನ್ನು ಸಲ್ಲಿಸಲಿ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಇಂದಿಲ್ಲಿ ಸವಾಲು ಹಾಕಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಬಿಎಂಪಿಯ ಬಿಜೆಪಿ ನಾಯಕರೊಬ್ಬರು, ದೇವೇಗೌಡರ ಕುಟುಂಬ ಅಪಾರ ಪ್ರಮಾಣದಲ್ಲಿ ಆಕ್ರಮ ಆಸ್ತಿ ಪಾಸ್ತಿ ಮಾಡಿದೆ ಎಂದು ದಾಖಲೆಗಳಿಲ್ಲದೆ ದೂರುವ ಪ್ರವೃತ್ತಿ ಸರಿಯಲ್ಲ, ದೇವೇಗೌಡರ ಕುಟುಂಬ ಹಾಗೇನಾದರೂ ಆಕ್ರಮ ಆಸ್ತಿ ಪಾಸ್ತಿ ಮಾಡಿದ್ದರೆ ಅದಕ್ಕೆ ಪೂರಕವಾದ ದಾಖಲೆಗಳನ್ನು ಒದಗಿಸಲಿ. ಸುಖಾ ಸುಮ್ಮನೆ ಹಿಟ್ ಅಂಡ್ ರನ್ ಕೇಸ್ ತರಹ ದೂರುವುದು ಸರಿಯಲ್ಲ. ಅದು ಅವರ ವ್ಯಕ್ತಿತ್ವಕ್ಕೆ ಗೌರವ ತರುವುದಿಲ್ಲ ಎಂದು ಕಿಡಿಕಾರಿದರು.

ನಮ್ಮ ಕುಟುಂಬದ ಮೇಲೆ ಅಂತಹ ಟೀಕೆಗಳು ಹೊಸತೇನಲ್ಲ. ಹಿಂದಿನಿಂದಲೂ ಇಂತಹ ಟೀಕೆಗಳನ್ನು ವ್ಯವಸ್ಥಿತವಾಗಿ ಮಾಡಿಕೊಂಡು ಬರಲಾಗುತ್ತಿದೆ. ಆದರೆ ಈ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಅವರು ನುಡಿದರು.

ದೇವೇಗೌಡರ ಕುಟುಂಬ ಅಲ್ಲಿ ಆಸ್ತಿ ಮಾಡಿದೆ,ಇಲ್ಲಿ ಆಸ್ತಿ ಮಾಡಿದೆ ಎಂಬ ದೂರುಗಳು ಹೇಗೆ ಹೊಸತಲ್ಲವೋ? ಅದೇ ರೀತಿ ಅದಕ್ಕೆ ಸಂಬಂಧಿಸಿದಂತೆ ನಡೆದ ತನಿಖೆಗಳೂ ಕಡಿಮೆಯಲ್ಲ. ಆದರೆ ಏನೇ ತನಿಖೆ ಮಾಡಿದರೂ ನಮ್ಮ ಕುಟುಂಬ ಆಕ್ರಮವಾಗಿ ಆಸ್ತಿ ಪಾಸ್ತಿ ಮಾಡಿದೆ ಎಂಬುದಕ್ಕೆ ದಾಖಲೆಗಳು ಸಿಕ್ಕಿಲ್ಲ ಎಂದರು. ಸಾರ್ವಜನಿಕ ಜೀವನದಲ್ಲಿ ಟೀಕೆಗಳು ಸಹಜ. ಆದರೆ, ಟೀಕೆ ಮಾಡುವಾಗ ಅದಕ್ಕೆ ಪೂರಕವಾದ ದಾಖಲೆಗಳನ್ನಿಟ್ಟುಕೊಂಡು ಮಾತನಾಡಬೇಕು. ಆದರೆ ಸುಖಾ ಸುಮ್ಮನೆ ಟೀಕೆ ಮಾಡುವ ಪ್ರವೃತ್ತಿ ಸರಿಯಲ್ಲ ಎಂದು ನುಡಿದರು.

ಹಾಗೇನಾದರೂ ನಾವು ಆಕ್ರಮ ಆಸ್ತಿ, ಪಾಸ್ತಿಮಾಡಿ ಅದಕ್ಕೆ ಸಂಬಂಧಿಸಿದಂತೆ ತೆರಿಗೆ ಪಾವತಿಸಿಲ್ಲ ಎಂದಾದರೆ ತಕ್ಷಣವೇ ಕುರಿತು ಮಾಹಿತಿ ನೀಡಲಿ. ಹಾಗೆ ಮಾಹಿತಿ ನೀಡದೆ ಮಾತನಾಡುವುದು ಸರಿಯಲ್ಲ ಎಂದು ಹೇಳಿದರು.


ಸಂಬಂಧಿತ ಟ್ಯಾಗ್ಗಳು

H.D.Kumaraswamy H.D.Deve Gowda ಪ್ರವೃತ್ತಿ ತೆರಿಗೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ