ಉಪಾಧ್ಯಾಯರ ನೇಮಕಕ್ಕೆ ನಿಮಗೇನು ತೊಂದರೆ?

What trouble do you have for the appointment of a teacher?

04-07-2018

ಬೆಂಗಳೂರು: ಸೂಕ್ತ ಪರವಾನಗಿ ಇಲ್ಲದೇ ಹಳ್ಳಿಗಳ ಕಿರಾಣಿ ಅಂಗಡಿಗಳಿಂದ ಹಿಡಿದು ಹಲವೆಡೆ ರಾಜಾರೋಷವಾಗಿ ಮದ್ಯ ಮಾರಾಟವಾಗುತ್ತಿದ್ದು, ಇದರಿಂದ ಸಮಾಜದ ಸ್ವಾಸ್ತ್ಯ ಹಾಳಾಗುತ್ತಿದೆ ಎಂದು ಕಾಂಗ್ರೆಸ್‍ನ ಹಿರಿಯ ಶಾಸಕ ಬಿ.ಸಿ.ಪಾಟೀಲ್ ವಿಧಾನಸಭೆಯಲ್ಲಿಂದು ತೀವ್ರ ಕಳವಳ ವ್ಯಕ್ತಪಡಿಸಿದರು.

ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿ, ಎಲ್ಲೆಂದರಲ್ಲಿ ಮದ್ಯ ಮಾರಾಟವಾಗುತ್ತಿರುವುದರಿಂದ ಸಣ್ಣ ಸಣ್ಣ ಹುಡುಗರೂ ಮದ್ಯ ವ್ಯಸನಿಗಳಾಗುತ್ತಿದ್ದಾರೆ. ಹೀಗಾಗಿ ತಕ್ಷಣವೇ ಪರವಾನಗಿ ರಹಿತ ಮಾರಾಟವನ್ನು ಸರ್ಕಾರ ಕಟ್ಟು ನಿಟ್ಟಾಗಿ ತಡೆಗಟ್ಟಬೇಕು ಎಂದರು.

ರಾಜ್ಯ ಸರ್ಕಾರ ಮದ್ಯದಂಗಡಿಗಳಿಗೆ ಲೈಸೆನ್ಸ್ ನೀಡಿದೆ. ಆದರೆ, ಲೈಸೆನ್ಸ್ ಇಲ್ಲದೆ ಹಳ್ಳಿ ಹಳ್ಳಿಗಳಲ್ಲಿ ಮದ್ಯ ಮಾರಾಟವಾಗುತ್ತಿದೆ. ಲೈಸೆನ್ಸ್ ಇರುವ ಮದ್ಯದಂಗಡಿಗಳಲ್ಲಿ ಮದ್ಯ ಮಾರಾಟ ಮಾಡುವುದು ಬೇರೆ. ಆದರೆ ಹೀಗೆ ಹಳ್ಳಿ ಹಳ್ಳಿಗಳಲ್ಲಿ ಲೈಸೆನ್ಸ್ ಇಲ್ಲದೆ ಮಾರಾಟ ಆಗುತ್ತಿರುವುದರಿಂದ ಹದಿನಾರು, ಹದಿನೇಳು ವರ್ಷದ ಹುಡುಗರು ಮದ್ಯ ವ್ಯಸನಕ್ಕೆ ತುತ್ತಾಗುತ್ತಿದ್ದಾರೆ.

ದುಡಿದು ನಾಡು ಕಟ್ಟಬೇಕಾದ ಯುವ ಸಮುದಾಯ ಈ ರೀತಿ ಚಿಕ್ಕ ವಯಸ್ಸಿನಲ್ಲೇ ಕುಡಿಯುವ ವ್ಯಸನಕ್ಕೆ ತುತ್ತಾದರೆ ಸಂಬಂಧಪಟ್ಟ ಕುಟುಂಬಗಳ ಕತೆ ಏನು?ನಾಳೆ ನಾಡು ಕಟ್ಟುವ ಉದ್ದೇಶಗಳ ಕತೆ ಏನು?ಅಂತ ಪ್ರಶ್ನಿಸಿದರು. ಹೀಗಾಗಿ ಸರ್ಕಾರ ತಕ್ಷಣವೇ ಲೈಸೆನ್ಸ್ ರಹಿತವಾಗಿ ಕಂಡ ಕಂಡಲ್ಲಿ ಮದ್ಯ ಮಾರಾಟವಾಗುವುದನ್ನು ತಡೆಗಟ್ಟಬೇಕು. ಆ ಮೂಲಕ ವ್ಯವಸ್ಥೆಗೆ ಬಲ ತುಂಬುವ ಕೆಲಸ ಮಾಡಬೇಕು. ಹಳ್ಳಿಗಳಲ್ಲಿ ಕಿರಾಣಿ ಅಂಗಡಿಗಳಿಂದ ಹಿಡಿದು ಕಂಡ ಕಂಡ ಷಾಪುಗಳಲ್ಲಿ ಮದ್ಯ ಮಾರಾಟವಾಗುತ್ತಿದೆ. ಇದನ್ನು ನೋಡಿಯೂ ಅಧಿಕಾರಿಗಳು ಸುಮ್ಮನಿದ್ದಾರೆ. ಇದು ಸರಿಯಲ್ಲ ಅಂತ ಪ್ರಶ್ನೆ ಮಾಡಿದರು.

ಇದೇ ರೀತಿ ಸರ್ಕಾರಿ ಶಾಲೆಗಳಿಗೆ ಅಗತ್ಯದ ಉಪಾಧ್ಯಾಯರನ್ನು ಭರ್ತಿ ಮಾಡಿ. ಇಲ್ಲದೆ ಹೋದರೆ ನಗರ, ಪಟ್ಟಣ ಪ್ರದೇಶಗಳಲ್ಲಿ ಖಾಸಗಿ ಕಾಲೇಜುಗಳ ಕಡೆ ಜನ ಮುಖ ಮಾಡುವ ಸ್ಥಿತಿ ಬರುತ್ತದೆ. ಹೀಗಾದರೆ ನಾಳೆ ಬಡ, ಮಧ್ಯಮ ವರ್ಗದವರ ಗತಿ ಏನು?ಎಲ್ಲಕ್ಕಿಂತ ಮುಖ್ಯವಾಗಿ ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಉಪಾಧ್ಯಾಯರ ಹುದ್ದೆಗಳನ್ನು ಭರ್ತಿ ಮಾಡಲು ನಿಮಗೇನು ತೊಂದರೆ? ತಕ್ಷಣ ಆ ಕೆಲಸ ಮಾಡಿ ಎಂದು ಮನವಿ ಮಾಡಿದರು.


ಸಂಬಂಧಿತ ಟ್ಯಾಗ್ಗಳು

MLA B.C.Patil liquor ಸರ್ಕಾರಿ ಶಾಲೆ ಉಪಾಧ್ಯಾಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Sir rural li school is and pu college du grant matter kelbekithu sir ee govt ge plssss salary ide 5 years work madthidivi
  • Thirthalingappa k
  • Lecturer