ಹೆಚ್ಡಿಕೆ ಅಭಿಮಾನಿಯಿಂದ ರೈತರ ಸಾಲಮನ್ನಾಗೆ ದೇಣಿಗೆ

CM kumaraswamy follower given 3 lakhs of Donations to farmers waiver

04-07-2018

ಮೈಸೂರು: ರೈತರ ಸಾಲಮನ್ನಾ ಮಾಡಲು ಸಿಎಂ ಕುಮಾರಸ್ವಾಮಿ ಅವರಿಗೆ ಅಭಿಮಾನಿಯೊಬ್ಬರು ಹಣ ನೀಡಿದ್ದಾರೆ. ಜಿಲ್ಲೆಯ ಕೆ.ಆರ್.ನಗರದ ಸಂತೋಷ್ ಎಂಬುವರು ದೇಣಿಗೆ ರೂಪದಲ್ಲಿ ಮೂರು ಲಕ್ಷ ರೂಪಾಯಿ ಹಣವನ್ನು ರೈತರ ಸಾಲಮನ್ನಾಗೆ ವಿನಿಯೋಗಿಸುವಂತೆ ನೀಡಿದ್ದಾರೆ. ಹೆಚ್.ಡಿ.ಕುಮಾರಸ್ವಾಮಿ, ಸಚಿವ ಸಾ.ರಾ.ಮಹೇಶ್ ಅಭಿಮಾನಿ ಆಗಿರುವ ಸಂತೋಷ್ ದೇಣಿಗೆ ಹಣವನ್ನು ಸಾಲಮನ್ನಾಕ್ಕೆ ಬಳಸಲು ಸಿಎಂ ಅವರಲ್ಲಿ ಮನವಿ ಮಾಡಿದ್ದಾರೆ. ದೇಣಿಗೆ ಹಣವನ್ನು ಸಾ.ರಾ.ಮಹೇಶ್ ಮೂಲಕ ಸಿಎಂಗೆ ತಲುಪಿಸಿದ್ದಾರೆ. ರೈತರ ಕಷ್ಟಕ್ಕೆ ಸ್ಪಂದಿಸಿರುವ ಸಂತೋಷ್ ಮೈಸೂರಿನ ಆರ್ಎಂಸಿ ಯಾರ್ಡ್ ನಲ್ಲಿ ಕಂಟ್ರಾಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಸಂತೋಷ್ ಅವರ ಈ ಕಾರ್ಯಕ್ಕೆ ಜೆಡಿಎಸ್ ಕಾರ್ಯಕರ್ತರು, ಸೇರಿದಂತೆ ಸಾರ್ವಜನಿಕರು ಶ್ಲಾಘಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Farmers debt kumaraswamy ಅಭಿಮಾನಿ ದೇಣಿಗೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ