ದೆಹಲಿ ಸರ್ಕಾರಕ್ಕೆ ಹಿನ್ನಡೆ..!

AAP v/s lieutenant governor

04-07-2018

ನವದೆಹಲಿ: ದೆಹಲಿ ಪರಮಾಧಿಕಾರದ ಸಮರದಲ್ಲಿ ಲೆಫ್ಟಿನೆಂಟ್​ ಗವರ್ನರ್​ಗೆ ಹಿನ್ನಡೆಯಾಗಿದೆ. ಲೆಫ್ಟಿನೆಂಟ್​ ಗವರ್ನರ್​ಗೆ ಯಾವುದೇ ಸ್ವತಂತ್ರ ಅಧಿಕಾರ ಇಲ್ಲ ಎಂದು ಸುಪ್ರೀಂ ಕೋರ್ಟ್ನ​ ಸಂವಿಧಾನ ಪೀಠ ಮಹತ್ವದ ಆದೇಶ ನೀಡಿದೆ. ಸುಪ್ರೀಂ ತನ್ನ ತೀರ್ಪಿನಲ್ಲಿ ದೆಹಲಿ ಸರ್ಕಾರದ ಸಂಪುಟದ ನಿರ್ಣಯಗಳಿಗೆ ಎಲ್​ಜಿ ಮನ್ನಣೆಯನ್ನು ನೀಡಬೇಕು. ಕೇಂದ್ರ-ರಾಜ್ಯ ಸರ್ಕಾರಗಳು ಹೊಂದಾಣಿಕೆಯಿಂದ ಕೆಲಸ ಮಾಡಬೇಕು. ಪಬ್ಲಿಕ್​​ ಆರ್ಡರ್, ಪೊಲೀಸ್​ ಮತ್ತು ಭೂಮಿ ವಿಚಾರದಲ್ಲಿ ರಾಜ್ಯಕ್ಕೆ ಅಧಿಕಾರವಿಲ್ಲ, ಸಂಘರ್ಷ ಇಲ್ಲದೇ ಸಂವಿಧಾನದ ಆಶಯದಂತೆ ಆಡಳಿತ ನಡೆಸಲು ಪೀಠ ಸೂಚನೆ ನೀಡಿದೆ.

ದೆಹಲಿಗೆ ಸ್ವತಂತ್ರ ರಾಜ್ಯ ಸ್ಥಾನಮಾನ, ಎಲ್​ಜಿ ಅಧಿಕಾರ ವ್ಯಾಪ್ತಿ ಪ್ರಶ್ನಿಸಿ ಆಪ್ ಸರ್ಕಾರ ಸುಪ್ರೀಂ ಕೋರ್ಟ್ ಗೆ ಅರ್ಜಿಸಿದ್ದ ಬೆನ್ನಲ್ಲೆ ವಿಚಾರಣೆ ನಡೆಸಿದ ಕೋರ್ಟ್, ದೆಹಲಿಗೆ ಪೂರ್ಣ ರಾಜ್ಯದ ಸ್ಥಾನಮಾನ ಕೇಳಿದ್ದ ಕೇಜ್ರಿವಾಲ್​ ಸರ್ಕಾರದ ಮನವಿಯನ್ನು ತಿರಸ್ಕರಿಸಿದೆ. ಇದರಿಂದ ಕೇಜ್ರಿವಾಲ್ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಇವತ್ತು ಮಹತ್ವದ ಆದೇಶ ನೀಡಿರುವ ಸುಪ್ರೀಂ ಕೋರ್ಟ್​ನ ದ್ವಿಸದಸ್ಯ ಪೀಠ ದೆಹಲಿಯ ಲೆಫ್ಟಿನೆಂಟ್ ಜನರಲ್​​​ ಅವರಿಗೆ ಸ್ವತಂತ್ರ ಅಧಿಕಾರ ಇಲ್ಲ ಎಂದು ಹೇಳಿದೆ. ದೆಹಲಿ ಸರ್ಕಾರದ ಸಚಿವ ಸಂಪುಟದ ನಿರ್ಣಯದಂತೆಯೇ ಎಲ್​ಜಿ ಕೆಲಸ ಮಾಡಬೇಕು ಎಂದು ನ್ಯಾಯಮೂರ್ತಿಗಳಾದ ದೀಪಕ್​ ಮಿಶ್ರಾ ನೇತೃತ್ವದ ಪೀಠ ಅಭಿಪ್ರಾಯಪಟ್ಟಿದೆ. ಆಡಳಿತಾತ್ಮಕ ನಿರ್ಧಾರಗಳನ್ನು ಕೈಗೊಳ್ಳಲು ಎಲ್​​ಜಿ ಸ್ವತಂತ್ರರಲ್ಲ ಎಂದು ಪೀಠವು ಹೇಳಿದೆ. ಇತ್ತೀಚೆಗೆ ಐಎಎಸ್ ಅಧಿಕಾರಿಗಳ ವಿಚಾರಕ್ಕೆ ಲೆಫ್ಟಿನೆಂಟ್​ ಗವರ್ನರ್​​​ ಅನಿಲ್ ಬೈಜಾಲ್​​​​ ಮತ್ತು ಸಿಎಂ ಕೇಜ್ರಿವಾಲ್​ ನಡುವೆ ಸಂಘರ್ಷ ಏರ್ಪಟ್ಟಿತ್ತು. ಗವರ್ನರ್ ​ಕಚೇರಿ ಮುಂದೆ ಕೇಜ್ರಿವಾಲ್​​ ಪ್ರತಿಭಟನಾ ಧರಣಿ ನಡೆಸಿದ್ದರು. ಅಲ್ಲದೇ ರಾಷ್ಟ್ರ ರಾಜಕಾರಣದಲ್ಲೂ ಈ ವಿಚಾರ ಮೋದಿ ವಿರುದ್ಧದ ಸಮರಕ್ಕೆ ಬಳಕೆಯಾಗಿತ್ತು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ