ಕಾಲೇಜಿಗೆ ತೆರಳಿದ್ದ ಯುವಕ ನಾಪತ್ತೆ!

A young man missing at kundapur..! complaint registered

04-07-2018

ಉಡುಪಿ: ನಾಪತ್ತೆಯಾಗಿದ್ದ ಯುವಕ 9 ದಿನಗಳಾದರೂ ಇದುವರೆಗೂ ಪತ್ತೆಯಾಗದಿದ್ದು ಪೋಷಕರಲ್ಲಿ ಆತಂಕ ಹೆಚ್ಚಿಸಿದೆ. ಜಿಲ್ಲೆಯ ಕುಂದಾಪುರದ ಜಡ್ಕಲ್ ಗ್ರಾಮ ಜೋಸೆಫ್ ಕ.ಜಿ.ಅವರ ಪುತ್ರ ಅಜಿತ್ ಜೋಸೆಫ್ (17)ನಾಪತ್ತೆಯಾಗಿರುವ ಯುವಕ. ಕಳೆದ ಜೂನ್ 25ರಂದು ಬೆಳಿಗ್ಗೆ 6:50ರ ಸಮಯದಲ್ಲಿ ಮನೆಯಿಂದ ಕಾಲೇಜಿಗೆ ತೆರಳಿದ್ದು ನಾಪತ್ತೆಯಾಗಿದ್ದಾನೆ. ಕಾಳಾವರದ ವರದರಾಜ ಶೆಟ್ಟಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಈ ಕುರಿತು ಕೊಲ್ಲೂರು ಠಾಣೆಯಲ್ಲಿ ದೂರು ದಾಖಲಾಗಿದೆ. ತಮ್ಮ ಪುತ್ರ ಈ ವರೆಗೂ ಮನೆಗೆ ಬಾರದಿದ್ದೂ ಪೋಷಕರು ಆತಂಕಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Missing Kundapur ನಾಪತ್ತೆ ಕಾಳಾವರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ