ದುಬಾರಿ ಹೆಡ್ ಫೋನ್ ಆಸೆಗಾಗಿ ಪೊಲೀಸರ ಅತಿಥಿಯಾದ ವಿದ್ಯಾರ್ಥಿಗಳು

Kannada News

23-02-2017

ಮೈಸೂರು : ರಾಬರಿ ಪ್ರಕರಣ, ಓರ್ವ ಅಪ್ರಾಪ್ತ ಹಾಗೂ ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸೇರಿ ಐವರ ಬಂಧನ. ದುಬಾರಿ ಹೆಡ್ ಫೋನ್ ಆಸೆಗಾಗಿ ಕೃತ್ಯ. ಮೈಸೂರಿನ ವಿಧ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನ ವಿಧ್ಯಾರ್ಥಿ ಸನತ್ (೨೦), ವಿಧ್ಯಾವಿಕಾಸ್ ಕಾಲೇಜಿನ ಸಿವಿಲ್ ಇಂಜಿನಿಯರ್ ವಿಧ್ಯಾರ್ಥಿ ಓ.ಎಸ್.ಖಾನ್ (೧೯), ಲಷ್ಕರ್ ಮೊಹಲ್ಲಾದ ಇಸ್ಮೈಲ್ ಖಾನ್(೧೯), ಸೈಯದ್ ಸೈಫ್(೧೯) ಹಾಗೂ ೧೬ ವರ್ಷದ ಡಿಪ್ಲೊಮಾ ವ್ಯಾಸಂಗ ಮಾಡುತ್ತಿರುವ ಬಾಲಕನ ಬಂಧನ. ಕಳೆದ ತಿಂಗಳು ಸನತ್  ಅಮೆಜಾನ್ ಆನ್ ಲೈನ್ ನಲ್ಲಿ ಸುಮಾರು ೨೦ ಸಾವಿರ ಮೌಲ್ಯದ ಹೆಡ್  ಫೋನ್ ಬುಕ್ ಮಾಡಿದ್ದಾನೆ.ಹೆಡ್ ಫೋನ್ ನ್ನು ತಲುಪಿಸಲು ಬಂದ ನೌಕರನನ್ನು ನಿರ್ಜನ ಪ್ರದೇಶಕ್ಕೆ ಬರುವಂತೆ ಮೊಬೈಲ್ ನಲ್ಲಿ ಸನತ್ ತಿಳಿಸಿದ್ದಾನೆ. ಹೆಡ್ ಫೋನ್ ಸಮೇತ ಮೈಸೂರಿನ  ಹೊರವಲಯದ ಮಾನಸಿ ನಗರಕ್ಕೆ ನೌಕರ ಬಂದಿದ್ದಾನೆ. ನಿರ್ಜನ ಪ್ರದೇಶದಲ್ಲಿ ಕಾದು ಕುಳಿತಿದ್ದ ಸನತ್ ಹಾಗೂ ತಂಡ  ನೌಕರನ ಕಣ್ಣಿಗೆ ಖಾರದ ಪುಡಿ ಎರಚಿ ಹೆಡ್ ಫೋನ್ ಕಸಿದು ಪರಾರಿಯಾಗಿದ್ದಾರೆ. ಜನವರಿ ೧೫ ರಂದು ರಾಬರಿನಡೆಸಿದ ತಂಡ ತಲೆ ಮರೆಸಿಕೊಂಡಿತ್ತು. ಮೈಸೂರು ದಕ್ಷಿಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇನ್ಸ್‌ಪೆಕ್ಟರ್ ಜಗದೀಶ್ ನೇತೃತ್ವದ ತಂಡ ಬಂಧನಕ್ಕಾಗಿ ಜಾಲ ಬೀಸಿತ್ತು. ಒಂದು ತಿಂಗಳ ನಂತರ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ನಾಲ್ವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು ಅಪ್ರಾಪ್ತನನ್ನು ಬಾಲಮಂದಿರದ ವಶಕ್ಕೆ  ನೀಡಲಾಗಿದೆ. ಕೃತ್ಯಕ್ಕೆ ಬಳಸಿದ ಕಾರಿನ ಸಮೇತ ಹೆಡ್ ಫೋನ್ ವಶಪಡಿಸಿಕೊಳ್ಳಲಾಗಿದೆ. ಆರೋಪಿ ಸನತ್ ಪಿಯುಸಿ ಯಲ್ಲಿ 590 ಅಂಕಗಳನ್ನು ಪಡೆದು ಉತ್ತೀರ್ಣನಾಗಿದ್ದಾನೆ.                    

Links :ಸಂಬಂಧಿತ ಟ್ಯಾಗ್ಗಳು

ಸಂಬಂಧಿತ ಟ್ಯಾಗ್ಗಳನ್ನು ಲಭ್ಯವಿಲ್ಲಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ