ಪ್ರಿಕರನಿಗಾಗಿ ಹೆತ್ತ ಮಗುವನ್ನೇ ಕೊಂದ ಪಾಪಿ ತಾಯಿ

A mother killed his own child

04-07-2018

ಕೋಲಾರ: ಪ್ರಿಯಕರನೊಂದಿಗೆ ಸೇರಿ ಹೆತ್ತ ಮಗುವನ್ನೇ ಹತ್ಯೆ ಮಾಡಿರುವ ದಾರುಣ ಘಟನೆ ಕೋಲಾರದಲ್ಲಿ ನಡೆದಿದೆ. ನಗರದ ಕನಕನಪಾಳ್ಯದಲ್ಲಿ ನಿನ್ನೆ ಈ ದುರ್ಘಟನೆ ನಡೆದಿದೆ. ಬೆಂಗಳೂರು ಮೂಲದ ನಿಖಿತಾ ಹಾಗೂ ಕೋಲಾರ ಕನಕನಪಾಳ್ಯದ ಅನಿಲ್ ಎಂಬುವರು ಈ ನೀಚ ಕೃತ್ಯ ಎಸಗಿದ್ದಾರೆ. ನಿಖಿತಾ ಹಾಗು ಲೋಕೇಶ್ ರ ಎರಡೂವರೆ ವರ್ಷದ ಮಗು ಕುಮುದಾಳನ್ನು ಉಸಿರುಗಟ್ಟಿಸಿ ಕೊಲೆ‌ ಮಾಡಿದ್ದಾರೆ.

ಎರಡು ವರ್ಷಗಳ ಹಿಂದೆ ನಿಖಿತಾಗೆ ಮೈಸೂರು ಮೂಲದ ಲೋಕೇಶ್ ಅವರೊಂದಿಗೆ ವಿವಾಹವಾಗಿತ್ತು. ನಂತರ ಲೋಕೇಶ್ ನಿಂದ ದೂರವಾಗಿದ್ದ ನಿಖಿತಾ, ಮಿಸ್ ಕಾಲ್ ಮೂಲಕ ಪರಿಚಯವಾಗಿದ್ದ ಅನಿಲ್ ನೊಂದಿಗೆ ಪ್ರೇಮವಾಗಿ ಇಬ್ಬರೂ ಮದುವೆಯಾಗಿದ್ದರು. ನಿಖಿತಾ, ಅನಿಲ್ ನೊಂದಿಗೆ ಬಂದ ಹಿನ್ನೆಲೆ ಬೆಂಗಳೂರು ಹಲಸೂರುಗೇಟ್ ಪೊಲೀಸ್ ಠಾಣೆಯಲ್ಲಿ ನಿಖಿತಾ ಪೋಷಕರು ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು. ಈ ಪ್ರಕರಣದ‌ ಜಾಡು ಹಿಡಿದ ಪೊಲೀಸರಿಗೆ ಮಗು ಕೊಲೆ ಪ್ರಕರಣ ಬಯಲಾಗಿದೆ. ಸಧ್ಯ ಕೋಲಾರ ನಗರ ಠಾಣಾ ಪೊಲೀಸರಿಂದ ಆರೋಪಿಗಳ ಬಂಧನವಾಗಿದ್ದು, ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

illegal relationship Murder ಪ್ರಕರಣ ಪ್ರಿಯಕರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ