ಯುಪಿಎ ಸರ್ಕಾರದ ಯೋಜನೆಗಳ ಹೆಸರು ಬದಲಿಸಿದರೆ, ದೇಶ ಬದಲಾಗಲ್ಲ !

Kannada News

27-05-2017

ಬೆಂಗಳೂರು:- ಯುಪಿಎ ಸರ್ಕಾರದ ಯೋಜನೆಗಳಿಗೆ ಹೊಸ ಹೆಸರಿಟ್ಟು ನಾಟಕ ಮಾಡುತ್ತಿರುದು, ಭಾರೀ ಮುಖ ಬೆಲೆಯ ನೋಟುಗಳನ್ನು ರದ್ದು ಮಾಡಿ ಬಡ,ಮಧ್ಯಮ ವರ್ಗ ನೆಲ ಕಚ್ಚುವಂತೆ ಮಾಡಿರುವುದೇ ಮೋದಿ ನೇತೃತ್ವದ ಸರ್ಕಾರ ಜನರಿಗೆ ನೀಡಿದ ಅಚ್ಚೇ ದಿನ್  ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ವ್ಯಂಗ್ಯವಾಡಿದ್ದಾರೆ. ದೇಶದ ಜನತೆಗೆ ಅಚ್ಚೇ ದಿನ್ ರಾತ್ರಿ ಕನಸಾಗಿದ್ದು, ಕೇಂದ್ರ ಸರ್ಕಾರ ಎಲ್ಲಾ ಕ್ಷೇತ್ರಗಳಲ್ಲೂ ವಿಫಲವಾಗಿದೆ. ಯುಪಿಎ ಸರ್ಕಾರದ ಯೋಜನೆಗಳಿಗೆ ಹೊಸ ಹೆಸರನ್ನು ಇಟ್ಟು, ಜನತೆಯನ್ನು ಮೋಡಿ ಮಾಡುವುದು, ಉದ್ಯಮಿಗಳಿಗೆ ಮಣೆ ಹಾಕುವುದೇ ಅದರ ಉದ್ಯೋಗವಾಗಿದೆ ಎಂದು ತೀವ್ರವಾಗಿ ಟೀಕಿಸಿದ್ದಾರೆ. ಭ್ರಷ್ಟಾಚಾರವನ್ನು ನಿಗ್ರಹಿಸುವ ಮಾತನಾಡಿದವರು ಲೋಕಪಾಲ ಮಸೂದೆ ಜಾರಿಗೆ ತರಲಿಲ್ಲ. ಪ್ರತಿ ದಿನ ದೇಶದಲ್ಲಿ 35 ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಠಿ ಮಾಡುವುದಾಗಿ ಹೇಳಿ, ನಾಲ್ಕು ಲಕ್ಷ ಉದ್ಯೋಗ ಸೃಷ್ಠಿಸಿದ್ದಾರೆ. ಸ್ವಚ್ಚ ಭಾರತ್ ಯೋಜನೆಯಡಿಯಲ್ಲಿ ಕಟ್ಟಿರುವ ಶೌಚಾಲಯಗಳು, ಅಧೋಗತಿಗೆ ಇಳಿದಿದ್ದು, ದೊಡ್ಡ ಹಗರಣವೇ ನಡೆದಿದೆ ಎಂದರು, ಇದೀಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ದಲಿತರ ಮೇಲೆ ಪ್ರೀತ ಉಕ್ಕಿದೆ ಎಂದು ವ್ಯಂಗವಾಡಿದ್ದಾರೆ. ಕೃಷಿ, ಆಂತರಿಕ ಭದ್ರತೆ, ಕೈಗಾರಿಕೆ, ಆರೋಗ್ಯ, ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ವಿಫಲರಾಗಿದ್ದಾರೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಒಂದು ಬ್ಯಾರಲ್‍ಗೆ 43 ಡಾಲರ್ ಇದೆ. ಆದರೂ ಪೆಟ್ರೋಲ್ ಡಿಸೇಲ್ ಬೆಲೆ ಇಳಿದಿಲ್ಲ ಎಂದರು.
ಕೈಗಾರಿಕೆಗಳ ಬೆಳವಣಿಗೆ ಕುಂಠಿತಗೊಂಡಿದೆ. ಸುಮಾರು 14 ಲಕ್ಷ ಕೋಟಿಯಷ್ಟು ಹಣ ಕೆಲವೇ ಉದ್ಯಮಿಗಳಿಗೆ ನೀಡಿದ್ದು, ಅದು ಮರು ಪಾವತಿಯಾಗುವುದಿಲ್ಲ ಎಂದರು. ನೋಟು ನಿಷೇಧ ಬಡವರ ಮೇಲೆ ಮಾಡಿದ ಸರ್ಜಿಕಲ್ ದಾಳಿ ಎಂದು ಬಣ್ಣಿಸಿದರು. ಎಷ್ಟು ಕಪ್ಪು ಹಣ ಬಂದಿದೆ ಎಂಬ ಮಾಹಿತಿಯನ್ನು ಯಾರು ತಿಳಿಸಲಿಲ್ಲ. ಕಳೆದ ಮೂರು ವರ್ಷದಲ್ಲಿ ಇಡೀ ದೇಶಕ್ಕೆ ಅನ್ವಯವಾಗುವ ಒಂದೇ ಒಂದು ಹೊಸ ಕಾರ್ಯಕ್ರಮವನ್ನು ಪ್ರಧಾನಿ ಮೋದಿ ಕೊಟ್ಟಿಲ್ಲ ಎಂದರು.
ಯುಪಿಎ ಸರ್ಕಾರದ ಯೋಜನೆಗಳನ್ನು ಮುಂದುವರೆಸಿ, ಹೆಸರು ಬದಲಿಸಿದೆ, ದೇಶ ಬದಲಾಗಲ್ಲ ಎಂದಿದ್ದಾರೆ.
 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ