ಮೇಯರ್ ಸಂಪತ್ ರಾಜ್ ಗೆ ಕೊಲೆ ಬೆದರಿಕೆ ಕರೆ!

Threatening call to sampath Raj!

03-07-2018

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಸಂಪತ್ ರಾಜ್ ಅವರಿಗೆ 50 ಲಕ್ಷಕ್ಕೆ ಬೇಡಿಕೆಯಿಟ್ಟು ಪರಪ್ಪನ ಅಗ್ರಹಾರ ಜೈಲಿನಿಂದಲೇ ಕೊಲೆ ಬೆದರಿಕೆ ಬಂದಿದೆ. ನಮಗೆ  50 ಲಕ್ಷ ಹಣ ಕೊಡು ಇಲ್ಲದಿದ್ದರೆ  ಕೊಲೆ ಮಾಡುತ್ತೇವೆ ಎಂದು ನಿನ್ನೆ ಎರಡು ಬಾರಿ ಜೈಲಿನಿಂದಲೇ ಕರೆ ಮಾಡಿ ವ್ಯಕ್ತಿಯೊಬ್ಬ ಕೊಲೆ ಬೆದರಿಕೆ ಹಾಕಿದ್ದಾನೆ. ಮುಂಜಾನೆ ಒಮ್ಮೆ ಫೋನ್ ಮಾಡಿ ಬೆದರಿಕೆ ಹಾಕಿದ್ದಾನೆ. ಬಳಿಕ ಸಂಜೆ ಮತ್ತೆ ಕರೆ ಮಾಡಿ ಹಣ ಕೊಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾನೆ. ಈ ಸಂಬಂಧ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಳಿಕ ಕರೆ ಬಂದಿದ್ದ ನಂಬರ್ ಕುರಿತು ವಿಚಾರಣೆ ನಡೆಸಿದಾಗ ಅದು ಪರಪ್ಪನ ಅಗ್ರಹಾರವನ್ನು ಸೂಚಿದೆ. ಆದ್ದರಿಂದ ಜೈಲಿನಿಂದ ಅಥವಾ ಜೈಲಿನ ಅಕ್ಕಪಕ್ಕದಿಂದ ಕರೆ ಬಂದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಕೊಲೆ ಬೆದರಿಕೆ ಹಾಕಿದ ದುಷ್ಕರ್ಮಿ ಯಾರು, ಜೈಲಿಗೆ ಹೇಗೆ ಮೊಬೈಲ್ ಹೋಯಿತು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Sampath Raj Mayor ಪರಪ್ಪನ ಅಗ್ರಹಾರ ಬೇಡಿಕೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ